ಇತ್ತೀಚಿನ ದಿನಗಳಲ್ಲಿ ಹೃದ್ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿವೆ. ಅದರಲ್ಲೂ ಯುವಕರು ಹೃದಯಾಘಾತದಿಂದ ಸಾಯುತ್ತಿರುವುದು ನಿಜಕ್ಕೂ ಆಘಾತಕಾರಿ. ಹಾಗಾಗಿ ಹೃದಯಾಘಾತದ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ.
ಹೃದಯಾಘಾತದ ಸಮಯದಲ್ಲಿ ಬಿಪಿ ಎಷ್ಟಿರುತ್ತದೆ ಎಂಬುದು ನಮ್ಮನ್ನು ಕಾಡುವ ಬಹುದೊಡ್ಡ ಪ್ರಶ್ನೆ. ಬಿಪಿ ಸಮಸ್ಯೆ ಇರುವವರು ಭವಿಷ್ಯದಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಾರೆಯೇ ಎಂಬ ಅನುಮಾನ ಕೂಡ ನಮ್ಮಲ್ಲಿ ವ್ಯಕ್ತವಾಗುತ್ತದೆ. ಬಿಪಿಗೂ ಹೃದಯಾಘಾತಕ್ಕೂ ಏನು ಸಂಬಂಧ ಎಂಬುದನ್ನು ವಿವರವಾಗಿ ತಿಳಿಯೋಣ.
ರಕ್ತದೊತ್ತಡವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಅದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಅನ್ನೋದು ಆರೋಗ್ಯ ತಜ್ಞರು ಮತ್ತು ವೈದ್ಯರ ಅಭಿಪ್ರಾಯ. ಸಾಮಾನ್ಯ ರಕ್ತದೊತ್ತಡವು 120/80ರ ನಡುವೆ ಇರಬೇಕು. ಬಿಪಿ ಇದಕ್ಕಿಂತ ಹೆಚ್ಚಾದರೆ 140 ಎಂಎಂಎಚ್‌ಜಿ ಮತ್ತು 90 ಎಂಎಂಎಚ್‌ಜಿ ಅಧಿಕ ಬಿಪಿ ಎಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಹೃದಯಾಘಾತದ ಅಪಾಯವು ಹೆಚ್ಚಾಗುತ್ತದೆ.
ಅಧಿಕ ಬಿಪಿ ಮತ್ತು ಹೃದ್ರೋಗದ ನಡುವಿನ ಸಂಬಂಧವೇನು ?
ಹೃದಯವು ರಕ್ತವನ್ನು ಪಂಪ್ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಬಿಪಿ ಸಂಭವಿಸುತ್ತದೆ. ಬಿಪಿ ಹೆಚ್ಚಾದಾಗ ಹೃದಯಾಘಾತದ ಭಯ ಹೆಚ್ಚಾಗುತ್ತದೆ. ಏಕೆಂದರೆ ಈ ಅವಧಿಯಲ್ಲಿ ಹೃದಯದ ಕೆಲಸ ಹೆಚ್ಚುತ್ತದೆ.
ಎದೆ ನೋವು ಮತ್ತು ಉಸಿರಾಟದ ತೊಂದರೆ ಸಹ ಹೆಚ್ಚಾಗುತ್ತದೆ. ಕೆಲವೊಮ್ಮೆ ಅಪಧಮನಿ ಕೂಡ ಸಿಡಿಯುತ್ತದೆ. ಹೃದಯದ ಕಾಯಿಲೆ ಇರುವವರಿಗೆ ರಕ್ತದೊತ್ತಡ ತುಂಬಾ ಅಪಾಯಕಾರಿ. ಆದ್ದರಿಂದ ಬಿಪಿಯನ್ನು ಯಾವಾಗಲೂ ನಿಯಂತ್ರಣದಲ್ಲಿಡಿ. ಇಲ್ಲದಿದ್ದರೆ ಗಂಭೀರ ಕಾಯಿಲೆಗೆ ಬಲಿಯಾಗಬಹುದು.
ಬಿಪಿ ನಿಯಂತ್ರಣ ಹೇಗೆ ?
ರಕ್ತದೊತ್ತಡ ಸಾಮಾನ್ಯವಾಗಿರಬೇಕೆಂದರೆ ಚೆನ್ನಾಗಿ ನಿದ್ದೆ ಮಾಡಬೇಕು. ಸರಿಯಾಗಿ ನಿದ್ದೆ ಮಾಡದವರಲ್ಲಿ ಬಿಪಿ ಜಾಸ್ತಿಯಾಗುವುದು ಹಲವು ಬಾರಿ ಕಂಡು ಬಂದಿದೆ.
ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಇದರಿಂದ ಕೂಡ ಬಿಪಿ ನಿಯಂತ್ರಣದಲ್ಲಿರುತ್ತದೆ. ಬಿಪಿಯನ್ನು ಹತೋಟಿಯಲ್ಲಿಡಲು ಉಪ್ಪನ್ನು ಕಡಿಮೆ ಸೇವಿಸಬೇಕು.
ಸಂಸ್ಕರಿಸಿದ ಆಹಾರ, ಉಪ್ಪಿನಕಾಯಿ ಅಥವಾ ಹೆಚ್ಚಿನ ಸೋಡಿಯಂ ಆಹಾರವನ್ನು ಸೇವಿಸಬೇಡಿ. ಏಕೆಂದರೆ ಇವುಗಳು ಆರೋಗ್ಯವನ್ನು ಹಾಳುಮಾಡುತ್ತವೆ. ಬಿಪಿ ಹೆಚ್ಚಳಕ್ಕೆ ಕಾರಣವಾಗುತ್ತವೆ.
ನಿತ್ಯದ ಆಹಾರದಲ್ಲಿ ಸಾಕಷ್ಟು ತರಕಾರಿಗಳು ಮತ್ತು ಹಣ್ಣುಗಳನ್ನು ಸೇರಿಸಿ. ಪ್ರತಿದಿನ ಕನಿಷ್ಠ 30 ನಿಮಿಷ ವಾಕಿಂಗ್ ಮಾಡಬೇಕು. ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಸರಿಯಾಗಿಟ್ಟುಕೊಂಡರೆ ಹೃದಯಾಘಾತದ ಅಪಾಯ ಕೂಡ ಕಡಿಮೆಯಾಗುತ್ತದೆ.