ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ,
ಹಿಟ್ಟಂ ಬಿಟ್ಟಂ ನಾಂ ಕೆಟ್ಟಂ
ಅಂದರೆ ರಾಗಿ ಮುದ್ದೆಯನ್ನು ತಿಂದವರಿಗೆ ಬೆಟ್ಟವನ್ನೇ ಕೀಳುವಶ್ಟು ಶಕ್ತಿ ತುಂಬಿರುತ್ತದೆ. ಹಿಟ್ಟು ತಿನ್ನದವರ ಆರೋಗ್ಯ ಕೆಟ್ಟ ಹಾಗೆಯೇ ಅನ್ನೋದೇ ಇದರ ಅರ್ಥ.
ರಾಗಿ ಎಷ್ಟೇ ಒಳ್ಳೆಯದು ಅಂದ್ರೂ ಅದನ್ನು ಸುಲಭವಾಗಿ ನುಂಗುವ ಕಲೆ ಎಷ್ಟೋ ಜನರಿಗೆ ಗೊತ್ತಿಲ್ಲ. ಅಂಥವರಿಗೆ ರಾಗಿ ಇಂದ ಸುಲಭವಾಗಿ ತಯಾರಿಸಿ, ಸೇವಿಸಬಲ್ಲ ರೆಸಿಪಿ ಇಲ್ಲಿದೆ.
4 ದೊಡ್ಡ ಚಮಚ ರಾಗಿ, 5-6 ಬಾದಾಮಿ, ಒಂದು ಒಣ ಖರ್ಜೂರ ಇಷ್ಟನ್ನೂ ಹಿಂದಿನ ದಿನವೇ ನೆನೆಸಿಡಿ.
ಮರುದಿನ ಬೆಳಗ್ಗೆ ಇದಕ್ಕೆ ಗೋಡಂಬಿ, ದ್ರಾಕ್ಷಿಯ ಜೊತೆಗೆ ನುಣ್ಣಗೆ ರುಬ್ಬಿ, ಬೇಕಿದ್ದರೆ ಸ್ವಲ್ಪ ಬಿಸಿ ಹಾಲು ಹಾಗೂ ಬೆಲ್ಲ ಸೇರಿಸಿ ಕುಡಿಯಿರಿ.