ಬೆಂಗಳೂರು : ಅಕ್ಟೋಬರ್ 1 ರಿಂದ ಪರಿಷ್ಕೃತ ಆಸ್ತಿ ಮಾರ್ಗಸೂಚಿ ದರ ಜಾರಿಯಾಗಲಿದ್ದು, ಸಬ್ ರಿಜಿಸ್ಟಾರ್ ಕಚೇರಿಗಳು ಕಾರ್ಯನಿರ್ವಹಿಸುವ ಕಾರಣ ನೋಂದಣಿದಾರರಿಗೆ ಎರಡು ದಿನ ಮಾತ್ರ ನೋಂದಣಿಗೆ ಅವಕಾಶ ಇದೆ.
ಕಾವೇರಿ 2.0 ತಂತ್ರಾಂಶಕ್ಕೆ ಪರಿಷ್ಕೃತ ಮಾರ್ಗಸೂಚಿ ದರ ಅಪ್ ಡೇಟ್ ಪ್ರಕ್ರಿಯೆ ಸಲುವಾಗಿ ಸೆಪ್ಟೆಂಬರ್ 30 ರ ಮಧ್ಯಾಹ್ನ 12 ಗಂಟೆಯಿಂದ ಅ.1 ರ ಬೆಳಗಿನ ಜಾವ 5 ರವರೆಗೆ ಹೊಸ ಅರ್ಜಿ ಸ್ವೀಕಾರ ಮಾಡಲಾಗುತ್ತದೆ.
ಇನ್ನು ಬುಧವಾರ ಒಂದೇ ದಿನ 26,058 ಸ್ಥಿರಾಸ್ತಿಗಳು ನೋಂದಣಿಯಾಗಿವೆ. ಈ ಮುಲಕ 331 ಕೋಟಿ ರೂ.ಆದಾಯ ಸಂಗ್ರಹವಾಗಿದೆ. ಮುದ್ರಾಂಕ ಮತ್ತು ನೋಂದಣಿ ಇಲಾಖೆ ಇತಿಹಾಸ ಹೊಸ ದಾಖಲೆ ಸೃಷ್ಟಿಸಿದೆ. ಕಾವೇರಿ 2,0 ತಂತ್ರಾಂಶದಲ್ಲಿ ಆನ್ ಲೈನ್ ಶುಲ್ಕ ಪಾವತಿ ವ್ಯವಸ್ಥೆಯನ್ನು ಅಳವಡಿಸಿದ್ದು,ರಾಜ್ಯದ 256 ಉಪನೋಂದಣಿ ಕಚೇರಿಗಳಲ್ಲಿ ಜೂ. 25 ರಂದು ಪೂರ್ಣ ಪ್ರಮಾಣದಲ್ಲಿ ಸುಧಾರಿತ ತಂತ್ರಾಂಶದಡಿಯೇ ಈ ಪ್ರಕ್ರಿಯೆ ನಡೆಯಲಿದೆ.