ಬೆಂಗಳೂರು : ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಖಾಲಿ ಇರುವ ಹುದ್ದೆಗಳಿಗೆ ಪ್ರತಿಯಾಗಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸೆಪ್ಟೆಂಬರ್ 29 ರಿಂದ ಆನ್ ಲೈನ್ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ತಿಳಿಸಿದೆ.
2023-24ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳೂ ಒಳಗೊಂಡಂತೆ) ಖಾಯಂ ಉಪನ್ಯಾಸಕರಿಗೆ ನಿಯಮಾನುಸಾರ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಬೋಧನಾ ಕಾರ್ಯಭಾರಕ್ಕೆ ಅನುಗುಣವಾಗಿ ಅತಿಥಿ ಉಪನ್ಯಾಸಕರ (ಗ್ರಂಥಪಾಲಕರು ಮತ್ತು ದೈಹಿಕ ಶಿಕ್ಷಣ ಸೇರಿದಂತೆ) ಸೇವೆಯನ್ನು ಬಳಸಿಕೊಳ್ಳುವ ಸಂಬಂದ ಉಲ್ಲೇಖ(1) ರಲ್ಲಿನ ಸರ್ಕಾರದ ನಿರ್ದೇಶನದ ಮೇರಗ ಆಯ್ಕೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ. ಅದರಂತ, ಉಲ್ಲೇಖ-(2) ರ ಈ ಕಛೇರಿಯ ಪ್ರಕಟಣೆಗಳಂತ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಯನ್ನು ಪಡೆಯಲಾಗಿದೆ. ಅಭ್ಯರ್ಥಿಗಳು ಅರ್ಜಿಯಲ್ಲಿ ನೀಡಿರುವ ಸೇವಾ ಅವಧಿ, ವಿದ್ಯಾರ್ಹತ ಇನ್ನಿತರ ವಿವರಗಳ ಆಧಾರದ ಮೇಲೆ ವಿಷಯವಾರು ರಾಜ್ಯವ್ಯಾಪಿ ಮರಿಟ್ ಪಟ್ಟಿಯನ್ನು (ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ-ಕರ್ನಾಟಕ ಸ್ಥಳೀಯ ವೃಂದ ಪ್ರತ್ಯೇಕವಾಗಿ) ದಿನಾಂಕ:19.09.2023 ರಂದು ಇಲಾಖೆಯ ಅಂತರ್ಜಾಲ ತಾಣ https://dce.karnataka.gov.in ರಲ್ಲಿ ಪ್ರಕಟಿಸಲಾಗಿದೆ.
2023-24ನೇ ಶೈಕ್ಷಣಿಕ ಸಾಲಿನಲ್ಲಿ ಲಭ್ಯವಾಗುವ ಹಚ್ಚುವರಿ ಕಾರ್ಯಭಾರಕ್ಕನುಗುಣವಾಗಿ ವಿಷಯವಾರು ಅವಶ್ಯವಿರುವ ಅತಿಥಿ ಉಪನ್ಯಾಸಕರ ಸಂಖ್ಯೆಗೆ ಸಮನಾಗಿ ಮೆರಿಟ್ ಲಿಸ್ಟ್ ಅನ್ನು ಪ್ರಕಟಿಸಲಾಗಿದ್ದು, ಮೆರಿಟ್ ಪ್ರಕಾರ ಕೌನ್ಸಿಲಿಂಗ್ ಮಾಡಲಾಗುವುದು ಹಾಗೂ ಅವಶ್ಯವಿರುವ ಸಂಖ್ಯೆಯಷ್ಟು ಅಭ್ಯರ್ಥಿಗಳಿಗೆ ಮಾತ್ರ ಕೌನ್ಸಿಲಿಂಗ್ ನಡೆಸಲಾಗುವುದು.