ಮೇಲ್ಜಾತಿ ಮೇಲಿನ ರಾಜ್ಯಸಭಾ ಸದಸ್ಯನ ಹೇಳಿಕೆ ವಿರುದ್ಧ RJD ಶಾಸಕ ಕಿಡಿ

ಬಿಹಾರ ಮಾಜಿ ಶಾಸಕ ಆನಂದ್​ ಮೋಹನ್​ರ ಪುತ್ರ ಹಾಗೂ ಆರ್​ ಜೆ ಡಿ ಶಾಸಕ ಚೇತನ್​ ಠಾಕೂರ್, ಸಮುದಾಯದ ವಿರುದ್ಧ ರಾಜ್ಯಸಭೆಯಲ್ಲಿ ತಮ್ಮ ಪಕ್ಷದ ಸಂಸದ ಮನೋಜ್​ ಝಾ ಅವರ ಕವಿತೆ ಕುರಿತಂತೆ ವಾಗ್ದಾಳಿ ನಡೆಸಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಚರ್ಚೆ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಮನೋಜ್ ಝಾ, ಠಾಕೂರ್​ ಕಾ ಕುವಾನ್​​ ಕವನವನ್ನು ವಾಚಿಸಿದ್ದರು. ಇದು ಚೇತನ್​ ಠಾಕೂರ್​ರ ಆಕ್ರೋಶಕ್ಕೆ ಕಾರಣವಾಗಿದ್ದು ಠಾಕೂರ್​​ಗಳ ಮೇಲಿನ ಯಾವುದೇ ನಿಂದನೆ ಅಥವಾ ದಾಳಿಯನ್ನು ನಾನು ಬಲವಾಗಿ ವಿರೋಧಿಸುತ್ತೇನೆ ಎಂದು ಕಿಡಿಕಾರಿದ್ದಾರೆ.

ಠಾಕೂರ್​ ಸಮಾಜವು ಎಲ್ಲಾ ವರ್ಗದ ಜನರನ್ನು ಒಳಗೊಂಡಿದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಒಂದು ಜಾತಿಯನ್ನು ಗುರಿ ಮಾಡುವುದು ಸರಿಯಲ್ಲ. ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಶಾಸಕ ಚೇತನ್​ ಠಾಕೂರ್​​​​​ ಹೇಳಿದ್ದಾರೆ.

ಮನೋಜ್​ ಝಾ ರಾಜ್ಯಸಭೆಯಲ್ಲಿ ಮಹಿಳಾ ಕೋಟಾದ ಮೇಲಿನ ಚರ್ಚೆ ನಡೆಸುತ್ತಿರುವ ಸಂದರ್ಭದಲ್ಲಿ ಓಂ ಪ್ರಕಾಶ್​ ವಾಲ್ಮೀಕಿ ಕವಿತೆ ಉಲ್ಲೇಖಿಸಿ ಠಾಕೂರ್​​ ಸಮಾಜದ ಬಗ್ಗೆ ಮಾತನಾಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read