Viral Video | ಆಕಾಶದಲ್ಲಿ ಗಮನ ಸೆಳೆದ ಅಣಬೆ ಆಕಾರದ ಮೋಡ : ಬೆರಗಾದ ನೆಟ್ಟಿಗರು 27-09-2023 8:35AM IST / No Comments / Posted In: Latest News, Live News, International ಅಣುಬಾಂಬ್ ಸ್ಫೋಟಗೊಂಡ ರೀತಿಯ ಮೋಡದ ಆಕಾರದ ಚಂಡಮಾರುತವೊಂದು ಅಮೆರಿಕದ ಒಕ್ಲಹೋಮ ಎಂಬಲ್ಲಿ ಕಾಣಿಸಿಕೊಂಡಿದೆ. ಕಿತ್ತಳೆ ಬಣ್ಣದ ಈ ಮೋಡದ ಆಕೃತಿಯು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅನೇಕರು ಈ ಮೋಡ ಅಣಬೆ ಆಕಾರದಲ್ಲಿ ಇದೆ ಎಂದು ಹೇಳ್ತಿದ್ದಾರೆ. ಪರಮಾಣು ಸ್ಫೋಟವಾದಾಗ ಯಾವ ರೀತಿಯ ಚಿತ್ರಣ ಇರುತ್ತದೆಯೋ ಈ ಮೋಡ ಕೂಡ ಅದೇ ರೀತಿಯ ಆಕಾರವನ್ನು ಹೊಂದಿದೆ. ನಾರ್ಮ್ನಲ್ಲಿ ಕಂಡು ಬಂದ ಅತ್ಯದ್ಭುತ ಮೋಡದ ಆಕೃತಿಯಿದು ಎಂದು ಟ್ವಿಟರ್ನಲ್ಲಿ ಈ ಮೋಡದ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಅಮೆರಿಕದ ಹವಾಮಾನ ಮುನ್ಸೂಚಕರು ನೀಡಿರುವ ಮಾಹಿತಿಯ ಪ್ರಕಾರ, ಇಲ್ಲಿ ಉಂಟಾದ ಚಂಡಮಾರುತದಿಂದಾಗಿ ಸೆಮಿನೋಲ್ ಕೌಂಟಿ ಎಂಬಲ್ಲಿ ಬೇಸ್ಬಾಲ್ಗಳಿಗಿಂತಲೂ ದೊಡ್ಡದಾದ ಆಲಿಕಲ್ಲು ಮಳೆ ಉಂಟಾಗಿದೆ. ಇದರ ಜೊತೆಯಲ್ಲಿ ಇದೀಗ ಈ ಅಣಬೆ ಆಕಾರದ ಮೋಡ ಕೂಡ ಸಖತ್ ಸದ್ದು ಮಾಡ್ತಿದೆ. Stunning storm structure seen from Norman, OK yesterday! This same cell produced larger than baseball size hail in Seminole county!#okwx pic.twitter.com/VhYPkLxrEM — WeatherNation (@WeatherNation) September 24, 2023