ವೈರಸ್ ರೂಪಾಂತರಗಳೊಂದಿಗೆ ಕೋವಿಡ್ ಆಂಟಿವೈರಲ್ ಡ್ರಗ್ molnupiravir ಲಿಂಕ್; ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ನೇಚರ್​ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವ್ಯಾಪಕವಾಗಿ ಬಳಕೆ ಮಾಡಲ್ಪಡುವ ಕೋವಿಡ್​ 19 ಆಂಟಿ ವೈರಲ್​ ಡ್ರಗ್​, ಮೊಲ್ನುಪಿರಾವಿರ್, SARS-CoV-2 ವೈರಸ್‌ನಲ್ಲಿನ ರೂಪಾಂತರಗಳ ಮಾದರಿಯೊಂದಿಗೆ ಸಂಬಂಧ ಹೊಂದಿದೆ ಎನ್ನಲಾಗಿದೆ.

ಫ್ರಾನ್ಸಿನ್​ ಕ್ರಿಕ್​​ ಇನ್​​ಸ್ಟಿಟ್ಯೂಟ್​​ ಹಾಗೂ ಬ್ರಿಟನ್​ನ ಕೆಂಬ್ರಿಡ್ಜ್​ ವಿಶ್ವವಿದ್ಯಾಲಯದ ಸಂಶೋಧಕರನ್ನು ಒಳಗೊಂಡಿದ್ದ ತಂಡವು ಈ ಅಧ್ಯಯನವನ್ನು ನಡೆಸಿದ್ದು, ಇದರಲ್ಲಿ ಮೊಲ್ನುಪಿರಾವಿರ್ ಡ್ರಗ್​​ ವೈರಸ್​​ನ ಅನುವಂಶಿಕ ಮಾಹಿತಿ ಅಥವಾ ಜೀನೋಮ್​ನ್ನು ರೂಪಾಂತರಗೊಳಿಸುತ್ತೆ ಎಂದು ತಿಳಿದು ಬಂದಿದೆ.

ಈ ರೂಪಾಂತರದ ಸಂದರ್ಭದಲ್ಲಿ ಇದು ವೈರಸ್​ಗೆ ಹಾನಿಯುಂಟು ಮಾಡಬಲ್ಲದು ಅಥವಾ ಅದನ್ನು ಸಾಯಿಸಬಹುದು. ಇದರಿಂದ ಮನುಷ್ಯನ ದೇಹದಲ್ಲಿ ವೈರಸ್​ನ ಶಕ್ತಿ ಕುಂದುತ್ತದೆ ಎಂದು ತಿಳಿದು ಬಂದಿದೆ. ಕೋವಿಡ್​ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಈ ಲಸಿಕೆಯನ್ನು ವ್ಯಾಪಕವಾಗಿ ಬಳಕೆ ಮಾಡಲಾಗಿದೆ. ಅನೇಕ ದೇಶಗಳು ಈ ಆಂಟಿವೈರಲ್​ ಡ್ರಗ್​ಗೆ ಮಾನ್ಯತೆ ನೀಡಿವೆ.

ವೈರಸ್‌ಗಳು ಸಾರ್ವಕಾಲಿಕವಾಗಿ ರೂಪಾಂತರಗೊಳ್ಳುತ್ತಿದ್ದರೂ, ಸಂಶೋಧಕರು ಜಾಗತಿಕ ಅನುಕ್ರಮ ಡೇಟಾಬೇಸ್‌ನಲ್ಲಿ ಪರಸ್ಪರ ಕ್ರಿಯೆಗಳನ್ನು ಗುರುತಿಸಿದ್ದಾರೆ, ಇದು COVID-19 ರೂಪಾಂತರಗಳ ವಿಶಿಷ್ಟ ಮಾದರಿಗಳಿಗೆ ತುಂಬಾ ವಿಭಿನ್ನವಾಗಿದೆ ಮತ್ತು ಅವು ಮೊಲ್ನುಪಿರಾವಿರ್ ತೆಗೆದುಕೊಂಡ ವ್ಯಕ್ತಿಗಳೊಂದಿಗೆ ಬಲವಾಗಿ ಸಂಬಂಧ ಹೊಂದಿವೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read