ಬೆಂಗಳೂರು : ಸಂಕಷ್ಟ ಸೂತ್ರದಡಿ ‘ಕಾವೇರಿ’ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಕಾವೇರಿ ಪ್ರತಿಭಟನೆ ನಡೆಯುತ್ತಿದ್ದು, ಸ್ಥಳಕ್ಕೆ ಆಗಮಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಂತರ ಮಾತನಾಡಿದರು.
ನಿಮ್ಮ ಹೋರಾಟದ ವಿಚಾರ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇವೆ, ಕಾವೇರಿ ನದಿ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ಸಂಕಷ್ಟ ಸೂತ್ರದಡಿ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಕ್ರಮಕೈಗೊಳ್ಳಬೇಕು ಎಂದರು.
ನಾವು ಕೂಡ ನಿಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತೇವೆ. ನಿಮ್ಮ ಮನವಿಗಳನ್ನು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಚರ್ಚೆ ಮಾಡುತ್ತೇವೆ, ಕಾವೇರಿ ವ್ಯಾಪ್ತಿಯ ನಾಲ್ಕು ರಾಜ್ಯಗಳ ಸಿಎಂಗಳನ್ನು ಕರೆದು ಸಭೆ ನಡೆಸಬೇಕು, ಸಂಕಷ್ಟ ಸೂತ್ರದಡಿ ‘ಕಾವೇರಿ’ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಕ್ರಮ ಕೈಗೊಳ್ಳಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ರಾಜ್ಯ ಸರ್ಕಾರ ರಾಜ್ಯದ ಜನರಿಗೆ ದ್ರೋಹ ಬಗೆದಿದೆ : ಬಿಜೆಪಿ ವಾಗ್ಧಾಳಿ
ಸ್ಟಾಲಿನ್ ರಾಜ್ಯಕ್ಕೆ ಕಳ್ಳತನದಿಂದ ಕಾವೇರಿ ನೀರು ಬಿಟ್ಟು, ಭದ್ರೆಯ ನೀರಿಗೆ ಅಂಕುಶ ಹಾಕಿ, ಸರ್ಕಾರ ರಾಜ್ಯದ ಜನರಿಗೆ ದ್ರೋಹ ಬಗೆದಿದೆ. ನಾಡಿಗೆ ಅನ್ನ ನೀಡುವ ಅನ್ನದಾತನ ಬದುಕು ದುಸ್ತರವಾಗುವ ಜೊತೆಗೆ, ಕುಡಿಯುವ ಹನಿ ನೀರಿಗೂ ಸಹ “ಕೈ” ಸರ್ಕಾರದ ತಪ್ಪು ನಿರ್ಧಾರಗಳಿಂದ ತತ್ವಾರ ಆರಂಭವಾಗಿದೆ. ರಾಜ್ಯದೆಲ್ಲೆಡೆ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ, ರೈತರು ಬೀದಿಗಿಳಿದು, ಬಂದ್ ಮಾಡಿ ಪ್ರತಿಭಟಿಸಿದರೂ, ಭಂಡ ಸರ್ಕಾರ ಮಾತ್ರ ನಿದ್ದೆಯಿಂದ ಮೇಲೇಳುತ್ತಿಲ್ಲ ಎಂದು ಬಿಜೆಪಿ ಕಿಡಿಕಾರಿದೆ.