ಬೆಂಗಳೂರು : ಜವಾಹರ ನವೋದಯ ವಿದ್ಯಾಲಯದ 2024-25 ನೇ ಸಾಲಿನ 11 ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮುಖಾಂತರ ತುಂಬಲು ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ವೆಬ್‍ಸೈಟ್ https://cbseitms.nic.in/2023/nvsxi_11 ನಲ್ಲಿ ಸಲ್ಲಿಸಲು ದಿ: 31-10-2023 ಕೊನೆಯ ದಿನಾಂಕವಾಗಿರುತ್ತದೆ. 2023-24 ನೇ ಸಾಲಿನಲ್ಲಿ ಸರ್ಕಾರಿ/ಸರ್ಕಾರೇತರ ಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಎಂದು ಜವಾಹರ್ ನವೋದಯ ವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.