ಜನತಾದರ್ಶನವೆಂಬ ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಎದುರಾದ ಪ್ರಶ್ನೆಗಳಿಗಿಲ್ಲ ಉತ್ತರ : ಬಿಜೆಪಿ ವಾಗ್ದಾಳಿ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಜನತಾ ದರ್ಶನ ಕಾರ್ಯಕ್ರಮದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು,ಜನತಾದರ್ಶನವೆಂಬ ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಎದುರಾದ ಪ್ರಶ್ನೆಗಳಿಗಿಲ್ಲ ಉತ್ತರ ಎಂದು ಟ್ವೀಟ್ ಮಾಡಿದೆ.

ಎಕ್ಸ್ ನಲ್ಲಿ  ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಅವರ ಸರ್ಕಾರಕ್ಕೆ ಎದುರಾದ ಪ್ರಶ್ನೆಗಳಿಗಿಲ್ಲ ಅವರ ಬಳಿ ಉತ್ತರ..! ಚುನಾವಣೆಗೂ ಮುನ್ನ ಘೋಷಿಸಿದ ಅನ್ನಭಾಗ್ಯದ ಹತ್ತು ಕೆಜಿ ಅಕ್ಕಿ ಕೊಡುತ್ತಿಲ್ಲ ಏಕೆ..?ಬರಗಾಲ ಬಂದಿದ್ದರೂ ಸುಪ್ರೀಂ ತೀರ್ಪಿಗೂ ಮುನ್ನ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದೇಕೆ..? ಪ್ರಧಾನಿ ಮೋದಿ ಅವರ ಸರ್ಕಾರದ ಯೋಜನೆಗಳನ್ನು ಕನ್ನಡಿಗರಿಗೆ ದೊರಕದಂತೆ ಮಾಡಿದ್ದೀರಿ ಏಕೆ..? ರೈತರು ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ತಡೆಯಲು ಪ್ರಯತ್ನ ಮಾಡುತ್ತಿಲ್ಲವೇಕೆ..? ಹಳ್ಳಿಗಳಿಗೆ ಸರ್ಕಾರಿ ಸಾರಿಗೆ ಬಸ್‌ಗಳನ್ನು ಸರ್ಕಾರ ಬಿಡುತ್ತಿಲ್ಲ ಏಕೆ..? ಒಂದು ಸಮುದಾಯದ ಉದ್ಧಾರಕ್ಕೆ ನೂರಾರು ಕೋಟಿ ಕೊಟ್ಟಿದ್ದೀರಿ, ಆದರೆ ನಿಮ್ಮಿಂದ ಬೇರೆ ಅಭಿವೃದ್ಧಿ ಆಗುತ್ತಿಲ್ಲವೇಕೆ..? ಪ್ರತಿಯೊಂದರ ಬೆಲೆ ಏರಿಕೆ ಮಾಡಿ ಸ್ವಾಭಿಮಾನಿ ಕನ್ನಡಿಗರ ಬದುಕನ್ನು ಬೀದಿಗೆ ತಂದಿದ್ದೀರಿ ಏಕೆ..?ವಿಧಾನಸೌಧದಲ್ಲಿ ಕೈಗೆ ಸಿಗದ ಸಚಿವರು ಅಡಗುತಾಣದಲ್ಲಿ ಅವಿತು ಕೂತಿದ್ದಾರೆ. ರಾಜ್ಯದ ಜನರು ಬೀದಿಯಲ್ಲಿ ನಿಂತು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ ಎಂದು ಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read