ರಾಹುಲ್ ಗಾಂಧಿ ಅನಿರೀಕ್ಷಿತ ಸರ್ಪ್ರೈಸ್ ನೀಡಿದ್ದಾರೆ. ಅವರು ಸೋಮವಾರ ಛತ್ತೀಸ್ಗಢದ ಬಿಲಾಸ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಮತ್ತು ಹಿಂದಿರುಗುವಾಗ ರೈಲಿನಲ್ಲಿ ಪ್ರಯಾಣಿಸಿದ್ದಾರೆ.
ರಾಯ್ಪುರಕ್ಕೆ ತೆರಳುತ್ತಿದ್ದ ರಾಹುಲ್ ಗಾಂಧಿ ಬಿಲಾಸ್ಪುರ-ಇಟ್ವಾರಿ ಇಂಟರ್ಸಿಟಿ ರೈಲಿನ ಸ್ಲೀಪರ್ ಕ್ಲಾಸ್ನಲ್ಲಿ ಪ್ರಯಾಣಿಸುತ್ತಿದ್ದರು. ಅವರೊಂದಿಗೆ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಇತರ ನಾಯಕರು ಇದ್ದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಸಹ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು.
ರೈಲಿನಲ್ಲಿ ಹಾಕಿ ಆಟಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದರು. ಹಾಕಿ ಆಟಗಾರರೊಬ್ಬರು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಹುಲ್ ಅವರೊಂದಿಗೆ ಮಾತನಾಡಿದರು. ರಾಜನಂದಗಾಂವ್ ಮೈದಾನ ಹಾಕಿ ಆಡಲು ಸೂಕ್ತವಲ್ಲ ಎಂದು ರಾಹುಲ್ ಅವರ ಗಮನಕ್ಕೆ ತರಲಾಯಿತು. ಈ ವಿಷಯದ ಬಗ್ಗೆ ಅವರು ಈ ಹಿಂದೆ ದೂರು ನೀಡಿದ್ದರು ಎಂದು ಅವರು ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕ ಸ್ಪಂದಿಸಿದೆ.