BREAKING : ಏಷ್ಯನ್ ಗೇಮ್ಸ್ ನಲ್ಲಿ ಸಿಂಗಾಪುರದ ವಿರುದ್ಧ ಭಾರತದ ಪುರುಷರ ಹಾಕಿ ತಂಡಕ್ಕೆ ಭರ್ಜರಿ ಗೆಲುವು

ಏಷ್ಯನ್ ಗೇಮ್ಸ್ 2023ರ  ಪುರುಷರ ಹಾಕಿಯಲ್ಲಿ ಭಾರತ ತಂಡವು ಸಿಂಗಾಪುರದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮತ್ತೊಂದು ಪದಕದ ಬೇಟೆಗೆ ಹೊರಟಿದೆ.

ನಾಯಕ ಹರ್ಮನ್ ಪ್ರೀತ್ ಸಿಂಗ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತ ತಂಡ ‘ಎ’ ಗುಂಪಿನ ಪಂದ್ಯದಲ್ಲಿ ಸಿಂಗಾಪುರ ವಿರುದ್ಧ 16-1 ಅಂತರದ ಗೆಲುವು ಸಾಧಿಸಿತು.

ಮೊದಲ ಕ್ವಾರ್ಟರ್ನಲ್ಲಿ ನೀರಸ ಪ್ರದರ್ಶನ ತೋರಿದ ಭಾರತ, ಸಿಂಗಾಪುರ ವಿರುದ್ಧ 6-0 ಗೋಲುಗಳ ಮುನ್ನಡೆ ಸಾಧಿಸಿತು. ಮನ್ದೀಪ್ ಒಂದು ಗೋಲು ಗಳಿಸಿದರೆ, ಲಲಿತ್, ಗುರ್ಜಂತ್, ಸುಮಿತ್ ಮತ್ತು ವಿವೇಕ್ ತಲಾ ಒಂದು ಗೋಲು ಗಳಿಸಿದರು. ದ್ವಿತೀಯಾರ್ಧದಲ್ಲಿ ಭಾರತ ಮೂರನೇ ಕ್ವಾರ್ಟರ್ನಲ್ಲೇ ಇನ್ನೂ 5 ಗೋಲುಗಳನ್ನು ಸೇರಿಸಿ ಭರ್ಜರಿ ಮುನ್ನಡೆ ಸಾಧಿಸಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read