alex Certify ʼಮಧುಮೇಹಿʼ ಗಳು ಬಾಳೆಹಣ್ಣು ಸೇವಿಸಬಹುದೇ..? ಇಲ್ಲಿದೆ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಧುಮೇಹಿʼ ಗಳು ಬಾಳೆಹಣ್ಣು ಸೇವಿಸಬಹುದೇ..? ಇಲ್ಲಿದೆ ಉತ್ತರ

ಮಧುಮೇಹ ರೋಗಿಗಳಿಗೆ ಸಾಮಾನ್ಯವಾಗಿ ಬಾಳೆಹಣ್ಣನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಬಾಳೆಹಣ್ಣಿನಿಂದಾಗಿ ಸಕ್ಕರೆ ಪ್ರಮಾಣ ಹೆಚ್ಚಾಗಬಹುದು ಅಂತಾ ಹೇಳಲಾಗುತ್ತೆ.

ಆದರೆ ಬಾಳೆಹಣ್ಣುಗಳಲ್ಲಿ ಪೊಟ್ಯಾಶಿಯಂ ಸಮೃದ್ಧವಾಗಿದ್ದು ರಕ್ತದೊತ್ತಡ ನಿಯಂತ್ರಿಸುವಲ್ಲಿ ಇದು ಸಹಾಯ ಮಾಡುತ್ತದೆ. ಅಲ್ಲದೇ ಹೃದಯದ ಆರೋಗ್ಯವನ್ನ ಹೆಚ್ಚಿಸುವಲ್ಲಿ ಬಾಳೆಹಣ್ಣು ಪರಿಣಾಮಕಾರಿಯಾಗಿದೆ.

ಬಾಳೆಹಣ್ಣಿನಿಂದ ಮೂಳೆಗಳ ಆರೋಗ್ಯ ಹೆಚ್ಚುವ ಹಿನ್ನೆಲೆಯಲ್ಲಿ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದಾಗಿದೆ. ಬಾಳೆಹಣ್ಣಿನಲ್ಲಿ ಹಲವಾರು ಬಗೆಯ ವಿಟಾಮಿನ್​ಗಳು ಹಾಗೂ ಖನಿಜಗಳು ಅಗಾಧ ಪ್ರಮಾಣದಲ್ಲಿ ಇದೆ.

ಮಧುಮೇಹ ರೋಗಿಗಳಿಗೆ ಬಾಳೆಹಣ್ಣಿನ ಪ್ರಯೋಜನಗಳು ಅವುಗಳ ಪಕ್ವತೆಯನ್ನು ಅವಲಂಬಿಸಿರುತ್ತದೆ. ಹಸಿರು ಅಥವಾ ಬಲಿಯದ ಬಾಳೆಹಣ್ಣುಗಳು ಒಟ್ಟಾರೆ ಚಯಾಪಚಯ ಆರೋಗ್ಯವನ್ನು ಸುಧಾರಿಸಬಹುದಾದರೂ, ಸಂಪೂರ್ಣವಾಗಿ ಮಾಗಿದ ಬಾಳೆಹಣ್ಣುಗಳು ಅಷ್ಟೊಂದು ಆರೋಗ್ಯಕರವಾಗಿರುವುದಿಲ್ಲ.

ಬಲಿಯದ ಬಾಳೆಹಣ್ಣುಗಳು ಹೆಚ್ಚು ನಿರೋಧಕ ಪಿಷ್ಟ ಮತ್ತು ಕಡಿಮೆ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ. ಅವು ಸಣ್ಣ ಕರುಳಿನಲ್ಲಿ ಜೀರ್ಣಕ್ರಿಯೆಗೆ ನಿರೋಧಕವಾಗಿರುತ್ತವೆ, ಉತ್ತಮ ಕರುಳಿನ ಬ್ಯಾಕ್ಟೀರಿಯಾವನ್ನು ಮತ್ತಷ್ಟು ಪೋಷಿಸುತ್ತವೆ. ಮತ್ತೊಂದೆಡೆ, ಸಾಮಾನ್ಯ ಬಾಳೆಹಣ್ಣುಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ವೇಗವಾಗಿ ಹೆಚ್ಚಿಸಲು ಕಾರಣವಾಗುತ್ತವೆ.

ನೋಯ್ಡಾದ ಡಯಟ್ ಮಂತ್ರದ ಸಂಸ್ಥಾಪಕರಾದ ಡಯೆಟಿಷಿಯನ್ ಮತ್ತು ಕಾಮಿನಿ ಸಿನ್ಹಾ ಅವರ ಪ್ರಕಾರ, ಮಧುಮೇಹಿಗಳು ಸಹ ಬಾಳೆಹಣ್ಣುಗಳನ್ನು ತಿನ್ನಬಹುದು ಆದರೆ ಸೇವನೆಯ ಪ್ರಮಾಣವನ್ನು ಖಚಿತಪಡಿಸಿಕೊಳ್ಳಬೇಕು. ಬಾಳೆಹಣ್ಣಿನ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ಮಧುಮೇಹ ರೋಗಿಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಮಧುಮೇಹ ಇರುವವರು ದಿನಕ್ಕೆ 1-2 ಮಧ್ಯಮ ಗಾತ್ರದ ಬಾಳೆಹಣ್ಣುಗಳನ್ನು ಸೇವಿಸಬಹುದು. ಆದಾಗ್ಯೂ, ರಕ್ತದಲ್ಲಿನ ಸಕ್ಕರೆಯ ಏರಿಳಿತವನ್ನು ಅನುಭವಿಸುತ್ತಿರುವವರು ಆಹಾರ ತಜ್ಞರು ಅಥವಾ ವೈದ್ಯರನ್ನು ಸಂಪರ್ಕಿಸಿದ ನಂತರವೇ ಬಾಳೆಹಣ್ಣುಗಳನ್ನು ಸೇವಿಸಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...