alex Certify ಇಲ್ಲಿದೆ ಭಾರತದ ಅಗ್ಗದ ಟಾಪ್​ 5 ಎಸ್​ಯುವಿ ಗಳ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಭಾರತದ ಅಗ್ಗದ ಟಾಪ್​ 5 ಎಸ್​ಯುವಿ ಗಳ ವಿವರ

ಇತ್ತೀಚಿನ ದಿನಗಳಲ್ಲಿ ಕಾರು ಪ್ರಿಯರ ಆಯ್ಕೆಗಳು ಕೂಡ ಬದಲಾಗಿದೆ. ಈಗಿನ ಕಾರು ಗ್ರಾಹಕರು ಕೇವಲ ಮೈಲೇಜ್​ ಮಾತ್ರ ನೋಡೋದಿಲ್ಲ. ಕಾರಿನಲ್ಲಿ ಟಚ್​ ಸ್ಕ್ರೀನ್​ ಡಿಸ್​ಪ್ಲೇ ವ್ಯವಸ್ಥೆ ಇದೆಯೇ..? ಸನ್​ರೂಫ್​ ಇದೆಯೇ..? ಸುರಕ್ಷತೆ ಹೇಗಿದೆ..? ಹೀಗೆ ಪ್ರತಿಯೊಂದರ ಕಡೆಗೂ ಗಮನ ಹರಿಸುತ್ತಾರೆ. ಹೀಗಾಗಿ ಕಾರು ತಯಾರಕರು ಈಗ ಮೊದಲಿಗಿಂತಲೂ ಹೆಚ್ಚಿ ಜಾಗರೂಕರಾಗಿ ಇರಬೇಕಾದ ಅನಿವಾರ್ಯತೆಯಿದೆ. ಈ ಎಲ್ಲಾ ಮಾನದಂಡಗಳನ್ನು ಆಧರಿಸಿ ಭಾರತದಲ್ಲಿ ಟಾಪ್​ ಫೈವ್​ ಎಸ್​ಯುವಿಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1 . ಹ್ಯುಂಡೈ ವೆನ್ಯೂ

ಟಾಟಾ ನೆಕ್ಸಾನ್​ ಹಾಗೂ ಕಿಯಾ ಸೋನೆಟ್​ಗೆ ಪ್ರತಿಸ್ಪರ್ಧೆ ನೀಡುವ ಹ್ಯುಂಡೈ ವೆನ್ಯೂ ಪಾಪ್ಯೂಲರ್​ ಸಬ್​ಕಾಂಪ್ಯಾಕ್ಟ್​ ಸಬ್​ – 4 ಎಸ್​ಯುವಿ ಆಗಿದೆ. ಗ್ರಾಹಕರನ್ನು ಇನ್ನಷ್ಟು ಸೆಳೆಯುವ ನಿಟ್ಟಿನಲ್ಲಿ ಹ್ಯುಂಡೈ ಕಂಪನಿಯು ಇತ್ತೀಚಿಗೆ ADAS ಸೌಕರ್ಯವನ್ನೂ ತಂದಿದೆ. ಇದರ ಎಕ್ಸ್​ ಶೋ ರೂಂ ಬೆಲೆ 10.32 ಲಕ್ಷ ರೂಪಾಯಿ ಆಗಿದೆ.

2. ಹ್ಯುಂಡೈ ವೆನ್ಯೂ ಎನ್​ ಲೈನ್​

ಹ್ಯುಂಡೈ ಕಂಪನಿಯು ವೆನ್ಯೂದ ಸುರಕ್ಷಾ ಮಾಪಕಗಳನ್ನ ಅಭಿವೃದ್ಧಿಗೊಳಿಸಿದ್ದು ಮಾತ್ರವಲ್ಲದೇ ಎಸ್​ಯುವಿಯ ಸ್ಪೋರ್ಟ್ ವರ್ಶನ್​ನ್ನ ಸೇಫ್ಟಿಯನ್ನೂ ಅಪ್​ಗ್ರೇಡ್​ ಮಾಡಿದೆ. ಇದೇ ವೆನ್ಯೂ ಎನ್​ ಲೈನ್​. ಇದರ ಎಕ್ಸ್​ ಶೋ ರೂಂ ಬೆಲೆ 11.99 ಲಕ್ಷ ರೂಪಾಯಿ ಆಗಿದೆ.

3. ಹೋಂಡಾ ಎಲಿವೇಟ್​

ಹೋಂಡಾ ಕಂಪನಿಯು ತೀರಾ ಇತ್ತೀಚಿಗೆ ತನ್ನ ಮೊಟ್ಟ ಮೊದಲ ಕಾಂಪ್ಯಾಕ್ಟ್​ ಎಸ್​ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಪೆಟ್ರೋಲ್​ ಇಂಜಿನ್​, ಪ್ರೀಮಿಯಂ ಇಂಟೀರಿಯರ್​ಗಳು, ಅತ್ಯಧ್ಭುತ ಸೇಫ್ಟಿ ಫೀಚರ್​ಗಳ ಮೂಲಕ ಈ ಕಾರು ಬೆಸ್ಟ್​ ಎನಿಸಿದೆ. ಇದರ ಎಕ್ಸ್​ ಶೋ ರೂಂ ಮೌಲ್ಯ 14.90 ಲಕ್ಷ ರೂಪಾಯಿ ಆಗಿದೆ.

4. ಎಂಜಿ ಆಸ್ಟರ್​

ADAS ನಂತೆಯೇ ಸೇಫ್ಟಿ ಫೀಚರ್​ನ್ನು ಹೊಂದಿರುವ ಭಾರತದ ಮೊದಲ ಕ್ಯಾಂಪ್ಯಾಕ್ಟ್​ ಎಸ್​ಯುವಿಗಳ ಸಾಲಿನಲ್ಲಿ ಆಸ್ಟರ್​ ಸೇರುತ್ತದೆ. ಇದರ ಆರಂಭಿಕ ಎಕ್ಸ್​ ಶೋ ರೂಂ ಬೆಲೆಯು 16.99 ಲಕ್ಷ ರೂಪಾಯಿ ಆಗಿದೆ.

5. ಕಿಯಾ ಸೆಲೋಟ್ಸ್​

ಭಾರತೀಯ ಮಾರುಕಟ್ಟೆಗೆ ಕೆಲವು ಸಮಯದ ಹಿಂದೆಯಷ್ಟೇ ಕಿಯಾ ಫೇಸ್​ಲಿಫ್ಟ್​​ ಕಿಯಾ ಸೆಲೋಟ್ಸ್​ಗಳನ್ನ ಪರಿಚಯಿಸಿದೆ. ಕೆಲವು ದಿನಗಳ ಹಿಂದೆಯಷ್ಟೇ ಇದರ ಹೊಸ ವೇರಿಯಂಟ್​ ಕೂಡ ಮಾರುಕಟ್ಟೆಗೆ ಬಂದಿದೆ. ಇದರ ಎಕ್ಸ್ ಷೋ ರೂಂ ಬೆಲೆಯು 19.39 ಲಕ್ಷ ರೂಪಾಯಿ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...