ಬೆಂಗಳೂರು: ಕಾವೇರಿ ನದಿ ನೀರಿಗಾಗಿ ಹೋರಾಟ ತೀವ್ರಗೊಂಡಿದ್ದು, ನಾಳೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಬೆಂಗಳೂರು ಬಂದ್ ಗೆ ಕರೆ ನೀಡಿದೆ. ಈ ನಡುವೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸೆ.29ರಂದು ಶುಕ್ರವಾರ ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ಸಂಘಟನೆಗಳು ಇಕ್ಕಟ್ಟಿಗೆ ಸಿಲುಕಿದ್ದು, ಯಾವ ಬಂದ್ ನಲ್ಲಿ ಭಾಗವಹಿಸಬೇಕು ಎಂಬ ಗೊಂದಲದಲ್ಲಿ ಸಿಲುಕಿವೆ.
ಈ ನಡುವೆ ನಾಳಿನ ಬೆಂಗಳೂರು ಬಂದ್ ಗೆ ನೀಡಿದ್ದ ಬೆಂಬಲವನ್ನು ಆಟೋ, ಓಲಾ, ಊಬರ್ ಕ್ಯಾಬ್ ಸಂಸ್ಥೆಗಳು ವಾಪಸ್ ಪಡೆದಿವೆ. ಬೆಂಗಳೂರು ಬಂದ್ ಗೆ ನಮ್ಮ ಬೆಂಬಲವಿಲ್ಲ ಎಂದು ಘೋಷಿಸಿವೆ.
ನಾಳೆ ಓಲಾ, ಊಬರ್, ಆಟೋ ಸೇವೆ ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ. ನಾಳಿನ ಬಂದ್ ಗೆ ನಮ್ಮ ಬೆಂಬಲವಿಲ್ಲ, ಸೆ.29ರ ಅಖಂಡ ಕರ್ನಾಟಕ ಬಂದ್ ಗೆ ನಾವು ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ಓಲಾ, ಊಬರ್ ಸಂಘಟನೆಗಳು ತಿಳಿಸಿವೆ.
ಈ ನಡುವೆ ಕನ್ನಡಪರ ಸಂಘಟನೆಗಳು ನಾಳಿನ ಬೆಂಗಳೂರು ಬಂದ್ ಗೆ ನಮ್ಮ ಬೆಂಬಲವಿಲ್ಲ, ಸೆ.29ರ ಅಖಂಡ ಕರ್ನಾಟಕ ಬಂದ್ ಗೆ ನಮ್ಮ ಬೆಂಬಲ ಎಂದು ಹೇಳಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಬಂದ್ ಹಾಗೂ ಕರ್ನಾಟಕ ಬಂದ್ ವಿಚಾರವಾಗಿ ಸಂಘಟನೆಗಳಲ್ಲೇ ಗೊಂದಲ, ಬಿನ್ನಾಭಿಪ್ರಾಯ ವ್ಯಕ್ತವಾಗಿದೆ.