ಇಂದ್ರಿ ಎಂಬ ಹೆಸರಿನ ಭಾರತೀಯ ಮಾಲ್ಟ್ ವಿಸ್ಕಿ ಇತ್ತೀಚಿಗೆ ವಿಶ್ವದ ಅತ್ಯುತ್ತಮ ವಿಸ್ಕಿ ಎಂಬ ಹೊಸ ದಾಖಲೆ ನಿರ್ಮಿಸಿದೆ. ಸಾಂಪ್ರದಾಯಿಕವಾಗಿ ತನ್ನ ರೋಮಾಂಚಕ ವೈವಿಧ್ಯ ಹಾಗೂ ಪರಂಪರಾಗತ ರುಚಿಗಾಗಿ ಈ ವಿಸ್ಕಿ ಹೆಸರುವಾಸಿಯಾಗಿದೆ. ಇದೇ ಕಾರಣಕ್ಕೆ ಈ ವಿಸ್ಕಿ ಜಗತ್ತಿನ ವಿಶೇಷ ಮನ್ನಣೆ ಗಳಿಸಿದೆ.
ಇಂದ್ರಿಯ ದೀಪಾವಳಿ ವಿಶೇಷ ಕಲೆಕ್ಟರ್ಸ್ 2023ನೇ ಆವೃತ್ತಿಯಲ್ಲಿ ಇತ್ತೀಚೆಗೆ ಪ್ರತಿಷ್ಠಿತ ವಿಸ್ಕಿಸ್ ಆಫ್ ಧಿ ವರ್ಲ್ಡ್ ಅವಾರ್ಡ್ಸ್ನಲ್ಲಿ ಉನ್ನತ ಗೌರವ ಪಡೆದುಕೊಂಡಿದೆ. ವಿಸ್ಕಿಸ್ ಆಫ್ ದಿ ವರ್ಲ್ಡ್ ಅವಾರ್ಡ್ಸ್ನಲ್ಲಿ ಬೆಸ್ಟ್ ಇನ್ ಶೋ ಡಬಲ್ ಗೋಲ್ಡ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಪಿಕ್ಕಾಡಿಲಿ ಡಿಸ್ಟಿಲರೀಸ್‌ನಿಂದ ಸ್ವದೇಶಿ ಬ್ರಾಂಡ್ ಇಂದ್ರಿ ತನ್ನ ಪ್ರಯಾಣವನ್ನು ಇಂದ್ರಿ-ಟ್ರಿನಿ ಎಂದು ಕರೆಯಲಾಗುವ ಭಾರತದ ಮೊದಲ ಟ್ರಿಪಲ್-ಬ್ಯಾರೆಲ್ ಸಿಂಗಲ್ ಮಾಲ್ಟ್‌ನೊಂದಿಗೆ ಆರಂಭಿಸಿದೆ. 2021 ರಲ್ಲಿ ಪ್ರಾರಂಭವಾದ ಈ ಬ್ರ್ಯಾಂಡ್ 14 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ.
ಬೆಳೆಯುತ್ತಿರುವ ಮದ್ಯಪಾನ ಮಾರುಕಟ್ಟೆಯಲ್ಲಿ ವಿಸ್ಕಿ ಪ್ರಿಯರಿಗೆ ಭಾರತೀಯ ಬ್ರ್ಯಾಂಡ್ಗಳು ಹೆಚ್ಚು ಇಷ್ಟವಾಗುತ್ತಿವೆ. ಸಿಂಗಲ್ ಮಾಲ್ಟ್ಗಳು ಹಾಗೂ ಬ್ಲೆಂಡ್ಸ್ಗಳು ಹೀಗೆ ವಿಸ್ಕಿಯು ವ್ಯಾಪಕ ಶ್ರೇಣಿಗಳನ್ನು ಹೊಂದಿದೆ. ಈ ವಿಸ್ಕಿ ಬ್ರ್ಯಾಂಡ್ಗಳು ವಿಶಿಷ್ಟವಾದ ಪ್ರಾದೇಶಿಕ ಸುವಾಸನೆ ಹಾಗೂ ಅರೊಮ್ಯಾಟಿಕ್ ಪ್ರೊಫೈಲ್ಗಳನ್ನು ಹೊಂದಿವೆ.