![ಮಣಿಪುರ: ಮೊಬೈಲ್ ಇಂಟರ್‌ನೆಟ್ ಸೇವೆ ಪುನರಾರಂಭ](https://images.prajavani.net/prajavani%2F2023-09%2Fc9b47a59-516c-41e9-9f8a-dba78f9f9dad%2Ffile7k59lumgn12qta2fdzl.jpg?rect=0%2C0%2C4800%2C2700&auto=format%2Ccompress&fmt=webp&fit=max&w=1200)
ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯದ ನಡುವಿನ ಹಿಂಸಾಚಾರದ ಹಿನ್ನೆಲೆಯಲ್ಲಿ ಮಣಿಪುರದಲ್ಲಿ ಈ ಹಿಂದೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಸುಳ್ಳು ಸುದ್ದಿ, ಅಪಪ್ರಚಾರ ಹಾಗೂ ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.
ಇದೀಗ ಪರಿಸ್ಥಿತಿ ತಹಬದಿಗೆ ಬಂದಿರುವ ಕಾರಣಕ್ಕೆ ಮೇ 3 ರಿಂದ ನಿರ್ಬಂಧ ಹೇರಿದ್ದ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಶನಿವಾರದಿಂದ ಪುನರಾರಂಭಗೊಳಿಸಲಾಗಿದೆ. ಆದರೆ ಯಾವುದೇ ಸುಳ್ಳು ಸುದ್ದಿ, ಅಪಪ್ರಚಾರ ಹಬ್ಬದಂತೆ ನೋಡಿಕೊಳ್ಳಲು ಹದ್ದಿನ ಕಣ್ಗಾವಲು ಇರಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಇಂಟರ್ನೆಟ್ ಸೇವೆಯನ್ನು ಆರಂಭಿಸಿರುವ ಕುರಿತಂತೆ ಮಾಹಿತಿ ನೀಡಿದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್, ಮಣಿಪುರದಲ್ಲಿ ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಹೀಗಾಗಿ ಇಂಟರ್ನೆಟ್ ಸೇವೆ ಆರಂಭಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.