ರಾಜ್ಯಸರ್ಕಾರದ `ಕಾಶಿಯಾತ್ರೆ’ಗೆ ಭರ್ಜರಿ ರೆಸ್ಪಾನ್ಸ್ : 1 ತಿಂಗಳು `ಟಿಕೆಟ್’ ಸಿಗಲ್ಲ!

ಬೆಂಗಳೂರು : ರಾಜ್ಯ ಸರ್ಕಾರದ ಕಾಶಿಯಾತ್ರೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಕರ್ನಾಟಕ-ಭಾರತ್ ಗೌರವ್ ಕಾಶಿ ರೈಲು ಯಾತ್ರೆಯ 6 ನೇ ಸುತ್ತಿನ ಪ್ರವಾಸ ಶನಿವಾರದಿಂದ ಆರಂಭವಾಗಿದ್ದು, ರೈಲಿನ ಎಲ್ಲಾ ಸೀಟುಗಳು ಭರ್ತಿಯಾಗಿವೆ.

ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಹೊರಟ ವಿಶೇಷ ರೈಲಿಗೆ ಸಾರಿಗೆ ಮತ್ತು ಹಾಗೂ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರು ಹಸಿರು ನಿಶಾನೆ ತೋರಿದ್ದು, ಸೆ.25 ರಂದು ರೈಲು ವಾರಾಣಾಸಿ ತಲುಪಲಿದೆ. 27 ರಂದು ಪ್ರಯಾಗ್ ರಾಜ್ ಗೆಪ್ರಯಾಣ ಬೆಳೆಸಲಿದೆ. ಸೆ. 28 ರಂದು ಅಯೋಧ್ಯೆ, ಸೆ. 29 ರಂದು ಗಾಯಕ್ಕೆ ಭೇಟಿ ನೀಡಲಿದ್ದು, ಅಕ್ಟೋಬರ್ 2 ಕ್ಕೆ ಬೆಂಗಳೂರಿಗೆ ರೈಲು ಮರಳಿ ಬರಲಿದೆ.

ಅಕ್ಟೋಬರ್ 7 ರಂದು 7 ನೇ ಸುತ್ತಿನ ಕಾಶಿ ಯಾತ್ರೆ ಆರಂಭವಾಗಲಿದ್ದು, ಈಗಾಗಲೇ ಎಲ್ಲ ಆಸನಗಳ ಟಿಕೆಟ್ ಬುಕ್ಕಿಂಗ್ ಪೂರ್ಣಗೊಂಡಿವೆ. ಆಸಕ್ತರು ಅಕ್ಟೋಬರ್ 26 ಕ್ಕೆ ಆರಂಭವಾಗಲಿರುವ ಪ್ರವಾಸಕ್ಕೆ ಟಿಕೆಟ್ ಕಾಯ್ದಿರಸಬಹುದು ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read