ನಾರಿ ಶಕ್ತಿಯಿಂದ ದೇಶದ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ರಾಜ್ಯಸಭೆಯ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಹೊಸ ಸಂಸತ್ ಕಟ್ಟಡವು ಹೊಸ ಆರಂಭದ ಸಂಕೇತವಾಗಿದೆ ಎಂದು ಹೇಳಿದರು. “ಇಂದು ಸ್ಮಾರಕ ಮತ್ತು ಐತಿಹಾಸಿಕ ದಿನ” ಎಂದು ಪ್ರಧಾನಿ ಹೇಳಿದರು. ಮಹಿಳಾ ಸಬಲೀಕರ, ಮಹಿಳಾ ಸಶಕ್ತಿಕರಣಕ್ಕೆ ಮತ್ತಷ್ಟು ಶಕ್ತಿ ತುಂಬ ಕೆಲಸ ಮಾಡುವ ಅವಕಾಶ ನನಗೆ ಒಲಿದು ಬಂದಿದೆ. ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಶೇಕಡಾ 33 ರಷ್ಟು ಮಹಿಳಾ ಮೀಸಲಾತಿ ಕಾನೂನು ತರುವುದು ನನಗೆ ಒಲಿದ ಭಾಗ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನೂತನ ಸಂಸತ್ ಭವನದಲ್ಲಿ ಇಂದು ವಿಶೇಷ ಅಧಿವೇಶನ ನಡೆದಿದ್ದು, ಲೋಕಸಭೆಯಲ್ಲಿ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದರು.