ಅನಿರುದ್ಧ್ ಜೊತೆಗಿನ ಮದುವೆ ವದಂತಿ; ಮೊದಲ ಬಾರಿಗೆ ಮೌನ ಮುರಿದ ನಟಿ ಕೀರ್ತಿ ಸುರೇಶ್​

ಬಹುಭಾಷಾ ನಟಿ ಕೀರ್ತಿ ಸುರೇಶ್​ ‌ʼಜವಾನ್ʼ​​ ಸಿನಿಮಾದ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್​ ನಡುವಿನ ವಿವಾಹ ವದಂತಿ ವಿಚಾರವಾಗಿ ಕೊನೆಗೂ ಮೌನ ಮುರಿದಿದ್ದಾರೆ. ಅನಿರುದ್ಧ್ ಹಾಗೂ ಕೀರ್ತಿ ಇದೇ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಯು ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

ಕಳೆದ ಕೆಲವು ಸಮಯದಿಂದ ಇಬ್ಬರೂ ರಿಲೇಶನ್​ಶಿಪ್​ನಲ್ಲಿದ್ದಾರೆ ಎಂಬ ವದಂತಿಯಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಯಾರಿಗೂ ಲಭ್ಯವಾಗಿರಲಿಲ್ಲ. ಇತ್ತೀಚಿನ ತಮ್ಮ ಸಂದರ್ಶನವೊಂದರಲ್ಲಿ ಕೀರ್ತಿ ಸುರೇಶ್​ ಈ ವಿಚಾರವಾಗಿ ಮಾತನಾಡಿದ್ದಾರೆ.

ಅನಿರುದ್ಧ್ ಹಾಗೂ ತಮ್ಮ ನಡುವಿನ ರಿಲೇಶನ್​ಶಿಪ್​ ವಿಚಾರವಾಗಿ ಪ್ರತಿಕ್ರಿಯಿಸಿದ ಕೀರ್ತಿ ಸುರೇಶ್, ಇದೊಂದು ಸುಳ್ಳು ಸುದ್ದಿ. ಅನಿರುದ್ಧ್ ನನಗೆ ಒಳ್ಳೆಯ ಸ್ನೇಹಿತ ಅಷ್ಟೇ. ನನ್ನ ಮದುವೆ ಆಗುವ ಕಾಲಕ್ಕೆ ಆಗುತ್ತೆ ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಇದೇ ವಿಚಾರವಾಗಿ ಕೀರ್ತಿ ಸುರೇಶ್ ತಂದೆ ಕೂಡ ಪ್ರತಿಕ್ರಿಯೆ ನೀಡಿದ್ದರು. ಈ ವದಂತಿಯಲ್ಲಿ ಯಾವುದೇ ಸತ್ಯವಿಲ್ಲ. ಇವೆಲ್ಲ ಆಧಾರರಹಿತ ಸುದ್ದಿಯಾಗಿದೆ. ಕೀರ್ತಿ ಹಾಗೂ ಅನಿರುದ್ಧ್ ನಡುವೆ ಏನೋ ನಡೀತಾ ಇದೆ ಎಂಬ ಸುದ್ದಿ ಪದೇ ಪದೇ ನಮ್ಮ ಕಿವಿಗೂ ಬೀಳ್ತಾ ಇರುತ್ತೆ ಎಂದು ಹೇಳಿದ್ದರು.

ಇದೇ ವರ್ಷ ಮೇ ತಿಂಗಳಲ್ಲಿ ದುಬೈ ಮೂಲದ ಉದ್ಯಮಿ ಫರ್ಹಾನ್​​ ಬಿಲ್​ ಲಿಯಾಕತ್​ ಜೊತೆಯಲ್ಲಿ ಕೀರ್ತಿ ಸುರೇಶ್​ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಇವರಿಬ್ಬರೂ ಶೀಘ್ರದಲ್ಲೇ ಮದುವೆಯಾಗ್ತಾರೆ ಅಂತಾ ಸುದ್ದಿಯಾಗಿತ್ತು. ಈ ವದಂತಿಗಳನ್ನೂ ಕೀರ್ತಿ ಸುರೇಶ್​ ತಂದೆ ತಳ್ಳಿ ಹಾಕಿದ್ದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read