alex Certify ಮಾರುಕಟ್ಟೆಗೆ ಬರ್ತಿದೆ ಸೂಟ್‌ಕೇಸ್ ಗಾತ್ರದ ಎಲೆಕ್ಟ್ರಿಕ್ ಬೈಕ್….! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರುಕಟ್ಟೆಗೆ ಬರ್ತಿದೆ ಸೂಟ್‌ಕೇಸ್ ಗಾತ್ರದ ಎಲೆಕ್ಟ್ರಿಕ್ ಬೈಕ್….! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಜಗತ್ತಿನಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಆದ್ರೆ ಕೆಲವೊಮ್ಮೆ ತಂತ್ರಜ್ಞಾನ ಸುಧಾರಿತ ಸಾಧನಗಳ ಖರೀದಿ ಮಾಡುವ ಸಂದರ್ಭ ಮಾಹಿತಿಯ ಕೊರತೆಯಿಂದ ಎಡವುತ್ತೇವೆ. ಆದ್ರೆ ಹೋಂಡಾ ಕಂಪೆನಿಯ ಮೋಟೋಕಾಂಪಾಕ್ಟೋ ಎಲೆಕ್ಟ್ರಿಕ್ ಸ್ಕೂಟರ್ ಉತ್ತಮ ಆಯ್ಕೆಯಾಗಿದೆ. ‌

ಈ ಎಲೆಕ್ಟ್ರಿಕ್ ಸ್ಕೂಟರ್ ಎಂಬತ್ತರ ದಶಕದಲ್ಲಿ ಐಕಾನಿಕ್ ಆಗಿದ್ದ ಮೋಟೋಕಾಪ್‌ನಂತೆ ರೈಡ್ ಮಾಡುವ ಸಂದರ್ಭ ಉತ್ತಮ ಅನುಭವವನ್ನು ನೀಡುತ್ತದೆ. ವಿಶೇಷ ಅಂದ್ರೆ ಇದು ಸೂಟ್‌ಕೇಸ್‌ನಷ್ಟೆ ಗಾತ್ರವನ್ನು ಹೊಂದಿದೆ. ಜೊತೆಗೆ ಪರಿಸರ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತದೆ.

ಒಂದು ಬಾರಿ ಚಾರ್ಜ್‌ ಮಾಡಿದ್ರೆ ನೀವು 19 ಕಿ.ಮೀ.ವರೆಗೆ ಪ್ರಯಾಣಿಸಬಹುದು. ಆದ್ದರಿಂದ ನಗರದಲ್ಲಿ ಟ್ರಾಫಿಕ್ ಜಾಮ್ ಆದ ಸಂದರ್ಭ ಹೆಚ್ಚು ಉಪಯೋಗಕ್ಕೆ ಬರುತ್ತೆ.

ಈ ಮೋಟೋಕಾಂಪಾಕ್ಟೋ ಸ್ಕೂಟರ್‌ನ ಹೊರಭಾಗ ಸಂಪೂರ್ಣ ಬಿಳಿ ಬಣ್ಣವನ್ನು ಹೊಂದಿದೆ. ಈ ದ್ವಿಚಕ್ರ ವಾಹನವು ಸೂಟ್‌ಕೇಸ್ ಗಾತ್ರಕ್ಕೆ ಅಂದ್ರೆ 3.7in ಅಗಲ x 21.1in ಎತ್ತರ x 29.2in ಉದ್ದಕ್ಕೆ ಕುಗ್ಗಿಸಬಹುದು. ಇದು ಕೇವಲ 18.7kgಯಷ್ಟು ತೊಕವನ್ನು ಹೊಂದಿದೆ. ಆದ್ರೆ 120kg ಭಾರ ಹೊರುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಎಲ್ಲಾ ವಯೋಮಾನದವರಿಗೂ ಬಳಕೆ ಮಾಡಲು ಯೋಗ್ಯವಾಗಿದೆ.

ಇದರ ಹಿಂದಿನ ಚಕ್ರವು ಡ್ರಮ್ ಬ್ರೇಕ್‌ನೊಂದಿಗೆ ಬ್ರೇಕಿಂಗ್ ಕಾರ್ಯವನ್ನು ನಿರ್ವಹಣೆ ಮಾಡುತ್ತೆ. ಇದು ಪೆಟೈಟ್ 6.8Ah ಬ್ಯಾಟರಿಯನ್ನು ಹೊಂದಿದೆ. ಹೋಂಡಾ ಕಂಪೆನಿಯ ಪ್ರಕಾರ ನೀವು ಈ ಬ್ಯಾಟರಿಯನ್ನು 3.5 ಗಂಟೆಗಳಲ್ಲಿ ರಿಚಾರ್ಜ್ ಮಾಡಿಕೊಳ್ಳಬಹುದು. ಈ ಮೋಟೋಕಾಂಪಾಕ್ಟೋ ಸ್ಕೂಟರ್ ಅಮೇರಿಕಾದಲ್ಲಿ ಮೊದಲ ಬಾರಿಗೆ ಮಾರುಕಟ್ಟೆ ಪ್ರವೇಶಕ್ಕೆ ರೆಡಿಯಾಗಿದೆ. ಸದ್ಯ ಇದರ ಬೆಲೆ ಭಾರತದ ಸುಮಾರು ₹82,458 ರೂಪಾಯಿಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...