alex Certify ʼಗಣೇಶ ಚತುರ್ಥಿʼ ಪ್ರಯುಕ್ತ 69 ಕೆಜಿ ಚಿನ್ನ, 336 ಕೆಜಿ ಬೆಳ್ಳಿಯ ಗಣಪ ಪ್ರತಿಷ್ಠಾಪನೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಗಣೇಶ ಚತುರ್ಥಿʼ ಪ್ರಯುಕ್ತ 69 ಕೆಜಿ ಚಿನ್ನ, 336 ಕೆಜಿ ಬೆಳ್ಳಿಯ ಗಣಪ ಪ್ರತಿಷ್ಠಾಪನೆ…!

ಗಣೇಶ ಚತುರ್ಥಿಯ ಅಂಗವಾಗಿ ಗೌಡ ಸಾರಸ್ವತ ಸೇವಾ ಮಂಡಲವು ಮುಂಬೈನಲ್ಲಿ 69 ಕೆಜಿ ಚಿನ್ನ ಹಾಗೂ 336 ಕೆಜಿ ಬೆಳ್ಳಿಯಿಂದ ಮಾಡಲ್ಪಟ್ಟ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಗೌಡ ಸಾರಸ್ವತ ಸೇವಾ ಮಂಡಲದ ಪ್ರತಿನಿಧಿ, ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ನಮಗೆ ಮೊದಲು 36 ಕೆಜಿ ಬೆಳ್ಳಿ ಹಾಗೂ 250 ಗ್ರಾಂ ಚಿನ್ನ ಸ್ವೀಕರಿಸಿದ್ದೆವು ಎಂದು ಹೇಳಿದ್ದಾರೆ.

ಈ ಕಾಣಿಕೆ ಪ್ರಮಾಣವು ಕ್ರಮೇಣವಾಗಿ ಹೆಚ್ಚಾಗಿದ್ದು ಬೆಳ್ಳಿ ಪ್ರಮಾಣವು 336 ಕೆಜಿಗೆ ಹಾಗೂ ಚಿನ್ನದ ಪ್ರಮಾಣವು 69 ಕೆಜಿಗೆ ಏರಿಕೆ ಕಂಡಿತ್ತು ಎಂದು ಹೇಳಿದ್ದಾರೆ. ಈ ವರ್ಷ ನಾವು 69ನೇ ವರ್ಷದ ಗಣೇಶ ಚತುರ್ಥಿ ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಚಂದ್ರಯಾನ 3 ಯಶಸ್ಸು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಗಣಪತಿಗೆ ಧನ್ಯವಾದ ಅರ್ಪಿಸಲು ಮಂಗಳವಾರ ವಿಶೇಷ ಯಾಗ ಆಯೋಜಿಸಲಾಗಿದೆ. ಅಲ್ಲದೇ ಅಯೋಧ್ಯೆ ರಾಮಮಂದಿರ ನಿರ್ಮಾಣದ ಪ್ರಯುಕ್ತವೂ ಬುಧವಾರ ಮತ್ತೊಂದು ಹೋಮ ಹವನ ನಡೆಯಲಿದೆ ಎಂದು ಗೌಡ ಸಾರಸ್ವತ ಸೇವಾ ಮಂಡಲ ತಿಳಿಸಿದೆ.

ಇನ್ನು ಈ ಮೂರ್ತಿ ನಿರ್ಮಾಣಕ್ಕೆ 360.45 ಕೋಟಿ ರೂಪಾಯಿ ಮೌಲ್ಯದ ಇನ್ಶುರೆನ್ಸ್​ ಪಡೆಯಲಾಗಿದೆ. ಭದ್ರತೆಗಾಗಿ ಅತ್ಯುನ್ನತ ಗುಣಮಟ್ಟದ ಕ್ಯಾಮರಾ ಸೇರಿದಂತೆ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ ಎಂದು ಗೌಡ ಸಾರಸ್ವತ ಸೇವಾ ಮಂಡಲ ತಿಳಿಸಿದೆ.

The GSB Seva Mandal is a Hindu religious organization that is dedicated to the worship of Lord Ganesha.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...