ಇನ್ನುಮುಂದೆ ನೀವು ಇ-ಸ್ವತ್ತು ಪಡೆಯಲು ತಿಂಗಳುಗಟ್ಟಲೇ ಕಾಲ ಅಲೆಯುವ ಅಗತ್ಯವಿಲ್ಲ. ಬಹಳ ಸುಲಭವಾಗಿ ಇಸ್ವತ್ತು ಪಡೆಯಬಹುದು.
ಹೌದು. ಇ-ಸ್ವತ್ತು ಮಾಡಿಸುವ ಜನರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ನಾಡಕಛೇರಿ ಹಾಗೂ ತಾಲ್ಲೂಕು ಕಛೇರಿ ಮಾತ್ರ ಚಾಲ್ತಿಯಲ್ಲಿದ್ದ ದಿಶಾಂಕ್ ಆಪ್ ನ್ನು ಗ್ರಾಮಮಟ್ಟದಲ್ಲಿ ಪರಿಚಯಿಸಲು ಸರಕಾರ ನಿರ್ಧರಿಸಿದೆ. ಈ ಮೂಲಕ ಜನರು ಕೆಲವೇ ದಿನದಲ್ಲಿ ಬಹಳ ಸುಲಭವಾಗಿ ಇಸ್ವತ್ತು ಪಡೆಯಬಹುದು.
ದಿಶಾಂಕ್ ಆಪ್ ಒಂದು ಮೊಬೈಲ್ ಅಪ್ಲಿಕೇಶನ್ ಆಗಿದ್ದು, ಅದು ಕರ್ನಾಟಕದ ಪೂರ್ತಿ ಆಸ್ತಿ, ಪ್ಲಾಟ್ಗಳ ವಿವರಗಳನ್ನು ಕಂಡುಹಿಡಿಯಲು ನೆರವಾಗುತ್ತದೆ.ಅರ್ಜಿದಾರರು ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿದರೆ ಸಾಕು ಗ್ರಾಮ ಪಂಚಾಯತ್ ಅಧಿಕಾರಿಗಳು/ಸಿಬ್ಬಂದಿಗಳು ಅರ್ಜಿದಾರರು ಕೊಟ್ಟ ದಾಖಲೆಗಳ ಆಧಾರದ ಮೇಲೆ ದಿಶಾಂಕ್ ಆ್ಯಪ್ ಮೂಲಕ ಆಸ್ತಿ/ಸ್ವತ್ತಿನ ಪ್ರತಿಯೊಂದು ಮೂಲೆಯ ಜಿಪಿಎಸ್ ಮತ್ತು ಸದರಿ ಆಸ್ತಿ/ಸ್ವತ್ತಿನ ಛಾಯಾಚಿತ್ರ ಸೆರೆ ಹಿಡಿಯಲಿದ್ದಾರೆ. ಗ್ರಾಮ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಮಾಡುವ ಅಗತ್ಯ ಇರಲ್ಲ. ಅಂದಹಾಗೆ ಆಪ್ ಮೂಲಕ ಪ್ರಕ್ರಿಯೆ ನಡೆಯುವುದರಿಂದ ಅರ್ಜಿ ಶುಲ್ಕ ಕೇವಲ 200ರೂ ಮಾತ್ರ ಕೊಡಬೇಕಾಗುತ್ತದೆ.
ರೈತರು ತಮ್ಮ ಜಮೀನಿನ ಅಳತೆ ಮಾಡಲು ಕಂದಾಯ ಇಲಾಖೆಯು ದಿಶಾಂಕ್ ಆ್ಯಪ್ ಅಭಿವೃದ್ಧಿ ಪಡಿಸಿದೆ. ಈ ದಿಶಾಂಕ್ ಆ್ಯಪ್ ಸಹಾಯದಿಂದ ರೈತರು ಜಮೀನನ ಅಳತೆ ಮಾಡಬಹುದಾಗಿದೆ.