ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 206.57 ಕೋಟಿ ರೂ. ಮತ್ತು ಕಲಬುರಗಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ 242.21 ಕೋಟಿ ರೂ. ಸೇರಿದಂತೆ ಒಟ್ಟು 448.78 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಕಲಬುರಗಿ ನಗರದ ಡಿ.ಎ.ಅರ್. ಪೊಲೀಸ್ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
ಕೆ.ಕೆ.ಆರ್.ಡಿ.ಬಿ. ಮಂಡಳಿಯಿಂದ “ಅಕ್ಷರ ಆವಿಷ್ಕಾರ” ಯೋಜನೆಯಡಿ ಪ್ರದೇಶದಲ್ಲಿ ಖಾಲಿ ಇರುವ ಪ್ರಾಥಮಿಕ ಶಾಲೆ-2,566 ಮತ್ತು ಪ್ರೌಢ ಶಾಲೆ-52 ಸೇರಿದಂತೆ ಒಟ್ಟು 2,618 ಶಿಕ್ಷಕರ ಹುದ್ದೆಗಳನ್ನು ಅತಿಥಿ ಶಿಕ್ಷಕರಾಗಿ ಭರ್ತಿ ಮಾಡಲು ಮತ್ತು ಅತಿಥಿ ಶಿಕ್ಷಕರಿಗೆ ಗೌರವ ಸಂಭಾವನೆ ಪಾವತಿಗೆ 18.34 ಕೋಟಿ ರೂ. ಮೊತ್ತದ ಯೋಜನೆಗೆ ಚಾಲನೆ ನೀಡಲಾಯಿತು.
ಮಂಡಳಿಯಿಂದ 7 ಜಿಲ್ಲೆಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ 139.36 ಕೋಟಿ ರೂ. ವೆಚ್ಚದ 33 ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು 50.81 ಕೋಟಿ ರೂ. ವೆಚ್ಚದ 38 ಕಾಮಗಾರಿಗಳ ಉದ್ಘಾಟನೆ ಸೇರಿ ಒಟ್ಟು 190.18 ಕೋಟಿ ರೂ., ಪಂಚಾಯತ್ ರಾಜ್ ಇಲಾಖೆಯಿಂದ 6.15 ಕೋಟಿ ರೂ. ವೆಚ್ಚದ 41 ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು 74 ಲಕ್ಷ ರೂ. ವೆಚ್ಚದ 2 ಕಾಮಗಾರಿಗಳ ಉದ್ಘಾಟನೆ ಸೇರಿ ಒಟ್ಟು 6.89 ಕೋಟಿ ರೂ., ಕೆ.ಆರ್.ಐ.ಡಿ.ಎಲ್. ನಿಗಮದಿಂದ 5.03 ಕೋಟಿ ರೂ. ವೆಚ್ಚದ 12 ಕಾಮಗಾರಿಗಳ ಉದ್ಘಾಟನೆ ಹಾಗೂ ನಿರ್ಮಿತಿ ಕೇಂದ್ರದಿಂದ 4.47 ಕೋಟಿ ರೂ. ವೆಚ್ಚದ 26 ಕಾಮಗಾರಿಗಳ ಉದ್ಘಾಟನೆ ಸೇರಿ ಒಟ್ಟಾರೆ 206.57 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಇದಲ್ಲದೆ ಕಲಬುರಗಿ ಜಿಲ್ಲೆಯಲ್ಲಿ ಜೆಸ್ಕಾಂ ನಿಗಮದ 57.41 ಲಕ್ಷ ರೂ. ವೆಚ್ಚದ 1 ಕಾಮಗಾರಿ ಉದ್ಘಾಟನೆ, ಕೆ.ಪಿ.ಟಿ.ಸಿ.ಎಲ್. ನಿಗಮದ 182.93 ಕೋಟಿ ರೂ. ವೆಚ್ಚದ 2 ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು 8.78 ಕೋಟಿ ರೂ. ವೆಚ್ಚದ 1 ಕಾಮಗಾರಿ ಉದ್ಘಾಟನೆ ಸೇರಿ ಒಟ್ಟು 191.72 ಕೋಟಿ ರೂ., ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ 8.50 ಕೋಟಿ ರೂ. ವೆಚ್ಚದ 1 ಕಾಮಗಾರಿ ಉದ್ಘಾಟನೆ, ಜಿಲ್ಲಾ ಕೈಗಾರಿಕೆ ಕೇಂದ್ರದ 4.07 ಕೋಟಿ ರೂ. 1 ಕಾಮಗಾರಿ ಉದ್ಘಾಟನೆ, ಸಮಾಜ ಕಲ್ಯಾಣ ಇಲಾಖೆಯ 18.50 ಕೋಟಿ ರೂ. ವೆಚ್ಚದ 2 ಕಾಮಗಾರಿಗಳ ಉದ್ಘಾಟನೆ, ಪಶುಸಂಗೋಪನೆ ಇಲಾಖೆಯ 84.32 ಲಕ್ಷ ರೂ. ವೆಚ್ಚದ 1 ಕಾಮಗಾರಿ ಉದ್ಘಾಟನೆ ಹಾಗೂ ಕೆ.ಕೆ.ಆರ್.ಟಿ.ಸಿ. ಸಂಸ್ಥೆಯ 1800.35 ಲಕ್ಷ ರೂ. ಮೊತ್ತದ ಒಂದು ಕಾಮಗಾರಿ ಸೇರಿ ಒಟ್ಟಾರೆ ಜಿಲ್ಲೆಯ 242.21 ಕೋಟಿ ರೂ. ಬೃಹತ್ ಮೊತ್ತದ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.