alex Certify BREAKING: ಗೂಂಡಾ ಕಾಯ್ದೆ ರದ್ದು : ಜೈಲಿನಿಂದ ಪುನೀತ್ ಕೆರೆಹಳ್ಳಿ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಗೂಂಡಾ ಕಾಯ್ದೆ ರದ್ದು : ಜೈಲಿನಿಂದ ಪುನೀತ್ ಕೆರೆಹಳ್ಳಿ ಬಿಡುಗಡೆ

ಬೆಂಗಳೂರು : ರಾಷ್ಟ್ರ ರಕ್ಷಣಾ ಪಡೆ ಅಧ್ಯಕ್ಷ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ದಾಖಲಿಸಲಾಗಿದ್ದ ಪ್ರಕರಣವನ್ನು ರದ್ದುಪಡಿಸಲಾಗಿದ್ದು,  ಸದ್ಯ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕೆರೆಹಳ್ಳಿ ಪುನೀತ್, ಬೆಂಗಳೂರಿನ ಜೆಪಿನಗರದಲ್ಲಿ ವಾಸವಿದ್ದ.ಪುನೀತ್ ಕೆರೆಹಳ್ಳಿ ವಿರುದ್ಧ ರಾಜ್ಯದ 11 ಠಾಣೆಗಳಲ್ಲಿ ಎಫ್ ಐಆರ್ ದಾಖಲಾಗಿತ್ತು. ಅಪರಾಧ ಪ್ರಕರಣಗಳಲ್ಲಿ ಪದೇ ಪದೇ ಭಾಗಿಯಾಗುತ್ತಿರುವುದರಿಂದ ಪುನೀತ್ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಇವರು ಕರ್ನಾಟಕ ಕಳ್ಳ, ಭಟ್ಟಿ ವ್ಯಾಪಾರಿಗಳ ಮಾದಕ ವಸ್ತು ಅಪರಾಧಿಗಳ, ಜೂಜುಕೋರರ, ಗೂಂಡಾಗಳ, ಅನೈತಿಕ ವ್ಯವಹಾರ ಅಪರಾಧಿಗಳ, ಕೊಳಚೆ ಪುದೇಶಗಳನ್ನು ಕಬಳಿಸುವವರ, ವಿಡಿಯೋ ಅಥವಾ ಆಡಿಯೋ ಪೈರೇಟ್ ಚಟುವಟಿಕೆಗಳ ತಡೆ ಅಧಿನಿಯಮ, 1985ರ (1985ರ ಕರ್ನಾಟಕ ಅಧಿನಿಯಮ 12) 3ನೇ ಪುಕರಣದ (1) ಮತ್ತು (2)ನೇ ಉಪ ಪ್ರಕರಣದಡಿಯಲ್ಲಿ ಪುನೀತ್ ಕುಮಾರ್ @ ಪುನೀತ್ ಕೆರೆಹಳ್ಳಿ ಬಿನ್ ಪುಟ್ಟಸಿದ್ಧಪ್ಪ ಹೆಚ್.ಎಸ್. 32 ವರ್ಷ, ಹಾಲಿ ವಿಳಾಸ: ನಂ.60, 2ನೇ ಕ್ರಾಸ್, ಗುರುರಾಘವೇಂದ್ರ ನಗರ, ಜೆ.ಪಿ.ನಗರ, 7ನೇ ಹಂತ, ಬೆಂಗಳೂರು ನಗರ, ಸ್ವಂತ ವಿಳಾಸ:ನಂ.53, ಕೆರೆಹಳ್ಳಿ ಗ್ರಾಮ, ಪಾಳ್ಯ ಹೋಬಳಿ, ಆಲೂರು ತಾಲ್ಲೂಕು, ಹಾಸನ ಜಿಲ್ಲೆ (ಹಾಲಿ ಕೇಂದ್ರ ಕಾರಾಗೃಹ, ಬೆಂಗಳೂರು ಇಲ್ಲಿ ಬಂಧನದಲ್ಲಿರುತ್ತಾರೆ) ಇವರ ವಿರುದ್ಧ ಆದೇಶ ಸಂಖ್ಯೆ:08/ಸಿಆರ್ಎಂ(4)/ಡಿಟಿಎನ್/2023, ದಿನಾಂಕ:11.08.2023ರಲ್ಲಿ ಹೊರಡಿಸಿರುವ ಬಂಧನ ಆದೇಶವನ್ನು ಸದರಿ ಅಧಿನಿಯಮದ 3ನೇ ಪುಕರಣದ 3ನೇ ಉಪ ಪ್ರಕರಣದನ್ವಯ ಸರ್ಕಾರವು ಆದೇಶ ಸಂಖ್ಯೆ:ಹೆಚ್‌ಡಿ 396 ಸಂಖ್ಯೆ:ಹೆಚ್‌ಡಿ. 396 ಎಸ್‌ಎಸ್‌ಟಿ 2023, ದಿನಾಂಕ:17.08.2023ರಲ್ಲಿ ಅನುಮೋದಿಸಿದ್ದು, ಸದರಿ ಅಧಿನಿಯಮದ 9ನೇ ಪುಕರಣದಡಿ ರಚಿತವಾದ ಸಲಹಾ ಮಂಡಳಿಯು “ಬಂಧಿಯನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿಲ್ಲ’ ಎಂದು ದಿನಾಂಕ:13.09.2023ರ ವರದಿಯಲ್ಲಿ ಅಭಿಪ್ರಾಯಪಟ್ಟಿರುತ್ತದೆ.

ಆದುದರಿಂದ, ಕರ್ನಾಟಕ ಸರ್ಕಾರವು ಸದರಿ ಅಧಿನಿಯಮದ 12ನೇ ಪ್ರಕರಣದ 2ನೇ ಉಪ ಪುಕರಣದಡಿ ಪುದತ್ತವಾದ ಅಧಿಕಾರವನ್ನು ಚಲಾಯಿಸಿ, ಪೊಲೀಸ್‌ ಆಯುಕ್ತರು, ಬೆಂಗಳೂರು ನಗರ ಇವರು, ಪುನೀತ್ ಕುಮಾರ್ @ ಪುನೀತ್ ಕೆರೆಹಳ್ಳಿ ಬಿನ್ ಪುಟ್ಟಸಿದ್ಧಪ್ಪ ಹೆಚ್.ಎಸ್. 32 ವರ್ಷ, ನಂ.60 2ನೇ ಕ್ರಾಸ್, ಗುರುರಾಘವೇಂದ್ರ ನಗರ, ಜೆ.ಪಿ.ನಗರ, 7ನೇ ಹಂತ, ಬೆಂಗಳೂರು ನಗರ ಇವರ ವಿರುದ್ಧ ಆದೇಶ ಸಂಖ್ಯೆ:08/ಸಿಆರ್‌ಎಂ(4)/ಡಿಟಿಎನ್/2023, ದಿನಾಂಕ:11.08.2023ರಲ್ಲಿ ಹೊರಡಿಸಿರುವ ಬಂಧನ ಆದೇಶವನ್ನು ಹಿಂಪಡೆದು, ಈ ಪ್ರಕರಣಕ್ಕೆ ಅನ್ವಯವಾಗುವಂತೆ ಮಾತ್ರು ತಕ್ಷಣದಿಂದ ಜಾರಿಗೆ ಬರುವಂತೆ ಬಂಧಮುಕ್ತಗೊಳಿಸಿ ಆದೇಶಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...