Video | ಪುಟ್ಟ ಬಾಲಕನಿಗೆ ಕ್ಲಾಸ್ ರೂಮಿನಲ್ಲಿ ಬರ್ತಡೇ ಸಪ್ರೈಸ್; ಭಾವುಕನಾದ ಪೋರ 17-09-2023 6:52AM IST / No Comments / Posted In: Latest News, Live News, International ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಹಿಂದೆ Twitter) ನಲ್ಲಿ ಚಿಕ್ಕ ಹುಡುಗನೊಬ್ಬನ ಮೊದಲ ಹುಟ್ಟುಹಬ್ಬದ ಆಚರಣೆಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ಕರುಣೆ, ಸ್ನೇಹ ಮತ್ತು ಭಾವನಾತ್ಮಕ ಕ್ಷಣವೊಂದನ್ನು ಸೆರೆಹಿಡಿದಿದೆ. ಹೃದಯತುಂಬಿ ಬರುವ ಈ ವಿಡಿಯೋದಲ್ಲಿ ಆ ಹುಡುಗ ತನ್ನ ಜೀವನದಲ್ಲಿ ಮೊದಲ ಬಾರಿಗೆ ಅಷ್ಟೊಂದು ಸಪ್ರೈಸ್ ಆಗಿರುವ ಕ್ಷಣವನ್ನು ತೋರಿಸುತ್ತದೆ. ಈ ಕ್ಷಣ ಆ ಹುಡುಗನ ಜೀವನದಲ್ಲಿ ಶಾಶ್ವತವಾಗಿ ನೆನಪಿನಲ್ಲಿರುವಂತಿದೆ. ಹಿಂದೆಂದೂ ಬರ್ತ್‌ಡೇ ಸೆಲೆಬ್ರೇಶನ್ ಮಾಡಿಕೊಳ್ಳದ ಆ ಪುಟ್ಟ ಬಾಲಕನಿಗೆ ಅದು ಮರೆಯಲಾಗದ ಸಮಾರಂಭವಾಯಿತು. ಆ ಹುಡುಗನ ಶಿಕ್ಷಕರು ಮತ್ತು ಸಹಪಾಠಿಗಳ ಈ ಯೋಜನೆ, ಯೋಚನೆಗೆ ನೆಟ್ಟಿಗರು ಧನ್ಯವಾದವನ್ನು ತಿಳಿಸಿದ್ದಾರೆ. ಅವನ ಆ ಜನ್ಮದಿನವು ಪ್ರೀತಿ ಮತ್ತು ಸಂತೋಷದಿಂದ ತುಂಬಿದ ಮೆಮೊರೇಬಲ್ ಸಂದರ್ಭವಾಯಿತು. ವೀಡಿಯೊದಲ್ಲಿ, ಹುಡುಗ ಕ್ಲಾಸ್ ರೂಂಗೆ ಎಂಟ್ರಿ ಆದ ಕೂಡಲೇ ಸಹಪಾಠಿಗಳು ಅವನ ಸುತ್ತಲೂ ಒಟ್ಟು ಸೇರುತ್ತಾರೆ. “ಜನ್ಮದಿನದ ಶುಭಾಶಯಗಳು” ಎಂಬ ಫೇಮಸ್ ಆಗಿರುವ ಹಾಡನ್ನು ಜೋರಾಗಿ ಹಾಡುತ್ತಾರೆ. ಈ ಹಾಡನ್ನು ಹಾಡುವ ಸಂದರ್ಭದಲ್ಲಿ ಸಹಪಾಠಿಗಳ ಮುಖ ಉತ್ಸಾಹದಿಂದ ಹೊಳೆಯುತ್ತವೆ. ಮತ್ತು ಅವರು ಸಹ ಅವನ ಸಂತೋಷದಲ್ಲಿ ಜೊತೆಯಾಗುತ್ತಾರೆ. ಬರ್ತ್‌ಡೇ ಸಾಂಗ್ ಹಾಡಿದ ಬಳಿಕ, ಸಹಪಾಠಿಗಳು ಹುಡುಗನನ್ನು ಹಗ್ ಮಾಡಿ ಆತ್ಮೀಯವಾಗಿ ಹುಟ್ಟಹಬ್ಬದ ಶುಭಾಶಯಗಳನ್ನು ಕೋರುತ್ತಾರೆ. ಈ ವೀಡಿಯೊ 2.8 ಮಿಲಿಯನ್ ವ್ಯೂವ್ಸ್ ಆಗಿದೆ. The child had never celebrated a birthday before, but thanks to the teacher and classmates, they made it happen🎂 pic.twitter.com/MoVwAKMX4d — Tansu Yegen (@TansuYegen) September 15, 2023