alex Certify ಏಕದಿನ ಕ್ರಿಕೆಟ್ ನಲ್ಲಿ 4000 ರನ್ ಪೂರೈಸಿದ ಡೇವಿಡ್ ಮಿಲ್ಲರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕದಿನ ಕ್ರಿಕೆಟ್ ನಲ್ಲಿ 4000 ರನ್ ಪೂರೈಸಿದ ಡೇವಿಡ್ ಮಿಲ್ಲರ್

Exclusive: David Miller Interview

ನಿನ್ನೆ ನಡೆದ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯ ನಡುವಣ ನಾಲ್ಕನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 416 ರನ್ ಗಳ ಬೃಹತ್ ಮೊತ್ತ ದಾಖಲಿಸಿತ್ತು.

ಈ ದೊಡ್ಡ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 259 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿದೆ. ಈ ಪಂದ್ಯದಲ್ಲಿ ಹೆನ್ರಿಚ್ ಕ್ಲಾಸೆನ್ 83 ಎಸೆತಗಳಲ್ಲಿ 174 ರನ್ ಗಳನ್ನು ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ. ಡೇವಿಡ್ ಮಿಲ್ಲರ್ ಕೂಡ ಅವರಿಗೆ ಸಾಥ್ ನೀಡಿದ್ದಾರೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತಂಡ ಏಳನೇ ಬಾರಿ ಏಕದಿನ ಕ್ರಿಕೆಟ್ ನಲ್ಲಿ 400 ರನ್ಗ ಗಳನ್ನು ಪೂರೈಸಿದಂತಾಗುತ್ತದೆ.

ಈ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ 45/82 ರನ್ ಗಳನ್ನು ಬಾರಿಸಿದ್ದಾರೆ. ಇದರ ಬೆನ್ನಲ್ಲೇ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ 4000 ರನ್ ಗಳ ಗಡಿ ಮುಟ್ಟಿದ್ದಾರೆ. ಇದುವರೆಗೂ 159 ಏಕದಿನ ಪಂದ್ಯಗಳನ್ನಾಡಿರುವ ಡೇವಿಡ್ ಮಿಲ್ಲರ್ ಒಟ್ಟಾರೆ 4027 ರನ್ ದಾಖಲಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...