alex Certify ‘ಮೈಸೂರು ದಸರಾ’ ಮಹೋತ್ಸವದ ವೇಳಾಪಟ್ಟಿ ಬಿಡುಗಡೆ : ಅ.15 ರಂದು ‘ನಾದಬ್ರಹ್ಮ’ ಹಂಸಲೇಖರಿಂದ ಚಾಲನೆ |Mysore Dasara 2023 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮೈಸೂರು ದಸರಾ’ ಮಹೋತ್ಸವದ ವೇಳಾಪಟ್ಟಿ ಬಿಡುಗಡೆ : ಅ.15 ರಂದು ‘ನಾದಬ್ರಹ್ಮ’ ಹಂಸಲೇಖರಿಂದ ಚಾಲನೆ |Mysore Dasara 2023

ಮೈಸೂರು :  ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದ್ದು, ಇದೀಗ ನವರಾತ್ರಿ ಆಚರಣೆಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.

15-10-2023 ಭಾನುವಾರ ಶರನ್ನವರಾತ್ರಿ ಪ್ರಾರಂಭವಾಗಲಿದ್ದು, ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಪೂಜೆ ನಡಯಲಿದೆ. ಬೆಳಿಗ್ಗೆ 10.15 ರಿಂದ 10.36 ಶುಭ ವೃಶ್ಚಿಕ ಲಗ್ನದಲ್ಲಿ ಪೂಜೆ ನಡೆಯಲಿದ್ದು ಮೈಸೂರು ದಸರಾಗೆ ಚಾಲನೆ ಸಿಗಲಿದೆ.

ಹೌದು. ಅಕ್ಟೋಬರ್ 15ರಂದು ಭಾನುವಾರ ಶರನ್ನವರಾತ್ರಿ ಉತ್ಸವ ಆರಂಭವಾಗಲಿದೆ. ಚಾಮುಂಡಿ ಬೆಟ್ಟದಲ್ಲಿ ನಾಡ ದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಬೆಳಗಿನ 10:15 ರಿಂದ 10:36ರ ಶುಭ ವೃಶ್ಚಿಕ ಲಗ್ನದಲ್ಲಿ ಚಾಲನೆ ನೀಡಲಾಗುವುದು. ಸಂಗೀತ ನಿರ್ದೇಶಕ ಹಂಸಲೇಖ ದಸರಾ ಉದ್ಘಾಟಿಸಲಿದ್ದಾರೆ.
ಅಕ್ಟೋಬರ್ 25 ರಂದು ವಿಜಯದಶಮಿಯಂದು ಮಧ್ಯಾಹ್ನ 1.46 ರಿಂದ 2:08 ಮಕರ ಲಗ್ನದಲ್ಲಿ ಮುಖ್ಯಮಂತ್ರಿಯವರು ನಂದೀ ಧ್ವಜ ಪೂಜೆ ನೆರವೇರಿಸಲಿದ್ದಾರೆ.

ನಾಡಹಬ್ಬ ಮೈಸೂರು ದಸರಾ ಹಬ್ಬದ ಅರಮನೆ ಪೂಜೆಗಳು ಆಗಸ್ಟ್ 15ರ ಸಂಜೆ 6.30ರಿಂದ ಶುಭ ಮೇಷ ಲಗ್ನದಲ್ಲಿ ಪೂಜೆ ಆರಂಭಿಸಲಾಗುವುದು.
ಅಕ್ಟೋಬರ್ 20ರಂದು ಶುಕ್ರವಾರ ಕಾತ್ಯಾಯನಿ -ಸರಸ್ವತಿ ಪೂಜೆ ನಡೆಯಲಿದೆ.
ಅಕ್ಟೋಬರ್ 21ರಂದು ಶನಿವಾರ ಕಾಳರಾತ್ರಿ -ಮಹಿಶಾಸುರ ಸಂಹಾರ
ಅಕ್ಟೋಬರ್ 23 ರಂದು ಸೋಮವಾರ ಆಯುಧ ಪೂಜೆ
ಅಕ್ಟೋಬರ್ 24ರಂದು ಮಂಗಳವಾರ ವಿಜಯದಶಮಿ ನಡೆಯಲಿದೆ. ಅ. 24ರಂದು ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವರು. ಅಂದು ಮಧ್ಯಾಹ್ನ 1:46 ರಿಂದ ಮಕರ ಲಗ್ನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಗಣ್ಯಾತಿಗಣ್ಯರು ಸಂಜೆ 4:40 ರಿಂದ 5 ಗಂಟೆಯೊಳಗೆ ಶುಭ ಮೀನ ಲಗ್ನದಲ್ಲಿ ಪುಷ್ಪಾರ್ಚನೆ ನೆರವೇರಿಸುವರು. ಬಳಿಕ ನಾಡ ಹಬ್ಬ ಮೈಸೂರು ದಸರಾ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆ ಆರಂಭವಾಗಲಿದೆ. 26-10-2023 ಭಾನುವಾರದಂದು ಚಾಮುಂಡಿ ಬೆಟ್ಟದ ಶ್ರೀಚಾಮುಂಡೇಶ್ವರಿ ರಥೋತ್ಸವ ನಡೆಯಲಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...