ಮಗನ ಕುಟುಂಬಕ್ಕೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ವ್ಯಕ್ತಿ; ಮಗ-ಮೊಮ್ಮಗ ದುರ್ಮರಣ


ತ್ರಿಶೂರ್: ವ್ಯಕ್ತಿಯೋರ್ವ ತನ್ನ ಮಗನ ಕುಟುಂಬವನ್ನೇ ಪೆಟ್ರೋಲ್ ಸುರಿದು ಬೆಂಕಿಯಿಟ್ಟಿರುವ ಘಟನೆ ತ್ರಿಸೂರ್ ನಲ್ಲಿ ನಡೆದಿದ್ದು, ಘಟನೆಯಲ್ಲಿ ಮಗ ಹಾಗೂ ಮೊಮ್ಮಗ ಸಜೀವ ದಹನವಾಗಿದ್ದರೆ, ಸೊಸೆ ಸ್ಥಿತಿ ಗಂಭೀರವಾಗಿದೆ.

ಘಟನೆ ಬಳಿಕ ವ್ಯಕ್ತಿ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಜಾನ್ಸನ್ ಎಂಬಾತ ತನ್ನ ಪತ್ನಿಯನ್ನು ಬೇರೊಂದು ರೂಮ್ ನಲ್ಲಿ ಲಾಕ್ ಮಾಡಿ, ಮಗ ಜೋಜಿ(38), ಸೊಸೆ ಲಿಜಿ (32) ಹಾಗೂ ಮೊಮ್ಮಗ ತೆಂಡೂಲ್ಕರ್ (12)ಇದ್ದ ರೂಮಿಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಬೆಂಕಿ ಕಂಡು ನೆರೆಮನೆಯವರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಗ, ಮೊಮ್ಮಗ, ಸೊಸೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೇ ಮಗ, ಮೊಮ್ಮಗ ಸಾವನ್ನಪ್ಪಿದ್ದಾರೆ. ಕೊಚ್ಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೊಸೆ ಲಿಜಿ, ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.

ಜಾನ್ಸನ್ ಹಾಗೂ ಮಗನ ನಡುವೆ ಕಳೆದ ಎರಡು ವರ್ಷಗಳಿಂದ ಜಗಳ ನಡೆಯುತ್ತಿತ್ತು. ಇದೇ ಕಾರಣಕ್ಕೆ ತಂದೆ, ಮಗನ ಕುಟುಂಬವನ್ನೇ ಮುಗಿಸುವ ಯತ್ನ ನಡೆಸಿದ್ದಾನೆ ಎನ್ನಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read