ನಾಸಿರುದ್ದೀನ್ ಶಾ ಗೆ ತಿರುಗೇಟು; ಭಯೋತ್ಪಾದಕರ ಬೆಂಬಲಿಗ ಎಂದು ಆರೋಪಿಸಿದ ‘ಕಾಶ್ಮೀರ್ ಫೈಲ್ಸ್’ ನಿರ್ದೇಶಕ

vivek agnihotri naseeruddin shah the kashmir files

ಹಿರಿಯ ಬಾಲಿವುಡ್ ನಟ ನಾಸಿರುದ್ದೀನ್ ಶಾ, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತು ಈ ಹಿಂದೆ ಟೀಕೆ ಮಾಡಿದ್ದು, ಇದರ ಜೊತೆಗೆ ಇತ್ತೀಚೆಗಷ್ಟೇ ಬಿಡುಗಡೆಯಾದ ಸನ್ನಿ ಡಿಯೋಲ್ ಅಭಿನಯದ ‘ಗದರ್ 2’ ಕುರಿತೂ ಕಟು ಮಾತುಗಳನ್ನು ಆಡಿದ್ದರು.

ಇಂತಹ ಸಿನಿಮಾಗಳು ಸಮಾಜದ ಸ್ವಾಸ್ಥ್ಯಕ್ಕೆ ಹಾನಿಕರ ಎಂದು ನಾಸಿರುದ್ದೀನ್ ಶಾ ಹೇಳಿದ್ದು, ಅವರ ಈ ಹೇಳಿಕೆಗೆ ವಿವೇಕ್ ಅಗ್ನಿಹೋತ್ರಿ ತಿರುಗೇಟು ನೀಡಿದ್ದಾರೆ. ನಾಸಿರುದ್ದೀನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿವೇಕ್ ಅಗ್ನಿಹೋತ್ರಿ, ಅವರನ್ನು ಭಯೋತ್ಪಾದಕರ ಬೆಂಬಲಿಗರಿಗೆ ಹೋಲಿಸಿದ್ದಾರೆ.

ಕಾಶ್ಮೀರಿ ಪಂಡಿತರ ಕುರಿತ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ವಿವಾದಗಳ ನಡುವೆಯೂ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಸಾಧಿಸಿದ್ದು, ಭಾರತ – ಪಾಕಿಸ್ತಾನ ನಡುವಿನ ಕಥಾ ಹಂದರವನ್ನು ಒಳಗೊಂಡಿರುವ ‘ಗದರ್ 2’ ಚಿತ್ರ ಕೂಡಾ ಭಾರಿ ಗಳಿಕೆ ಮಾಡಿತ್ತು. ಆದರೆ ಇಂತಹ ಚಿತ್ರಗಳು ಸಮಾಜಕ್ಕೆ ಹಾನಿಕರ ಎಂದು ನಾಸಿರುದ್ದೀನ್ ಶಾ ಪ್ರತಿಕ್ರಿಯೆ ನೀಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read