HomeKarnatakaBIG NEWS: ಹೋಟೆಲ್ ಈಜುಕೊಳದಲ್ಲಿ ಶವವಾಗಿ ಪತ್ತೆಯಾದ ಬ್ಯಾಂಕ್ ಮ್ಯಾನೇಜರ್

BIG NEWS: ಹೋಟೆಲ್ ಈಜುಕೊಳದಲ್ಲಿ ಶವವಾಗಿ ಪತ್ತೆಯಾದ ಬ್ಯಾಂಕ್ ಮ್ಯಾನೇಜರ್

ಮಂಗಳೂರು: ಪ್ರತಿಷ್ಠಿತ ಹೋಟೆಲ್ ನ ಈಜುಕೊಳದಲ್ಲಿ ಬ್ಯಾಂಕ್ ಮ್ಯಾನೇಜ್ ಓರ್ವರು ಶವವಾಗಿ ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದೆ.

ಕೇರಳದ ತಿರುವನಂತಪುರಂ ನಿವಾಸಿ ಗೋಪು ಆರ್.ನಾಯರ್ ಮೃತ ಮ್ಯಾನೇಜರ್. ಕೇರಳದ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾನುವಾರ ಮಂಗಳೂರಿನ ಹೋಟೆಲ್ ಗೆ ಬಂದು ತಂಗಿದ್ದ ಗೋಪು ನಾಯರ್ ಇದೀಗ ಹೋಟೆಲ್ ನ ಈಜುಕೊಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈಜುಕೊಳದಲ್ಲಿ 11 ಅಡಿ ಆಳದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಈಜುತ್ತಿರುವಾಗಲೇ ಸ್ವಿಮಿಂಗ್ ಪೂಲ್ ನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಹೋಟೆಲ್ ರೂಮ್ ನಲ್ಲಿ ಖಾಲಿ ಮದ್ಯದ ಬಾಟಲಿ ಪತ್ತೆಯಾಗಿದ್ದು, ಹೋಟೆಲ್ ರೂಮ್ ನಲ್ಲಿ ಮದ್ಯ ಸೇವಿಸಿ ಸ್ವಿಮಿಂಗ್ ಪೂಲ್ ಗೆ ಇಳಿದಿರುವ ಅನುಮಾನ ವ್ಯಕ್ತವಾಗಿದೆ.

ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular