ಬೆಂಗಳೂರು : ಇಂದು ಬೆಂಗಳೂರು ಬಂದ್ ಹಿನ್ನೆಲೆ ಕೆಲವು ಶಾಲಾ ಕಾಲೇಜುಗಳಿಗೆ ಮಾತ್ರ ರಜೆ ಘೋಷಣೆ ಮಾಡಿದ್ದು, ಬೆಂಗಳೂರಿನ ಹಲವು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ.
ಹೌದು, ಕರ್ನಾಟಕ ಸರ್ಕಾರದ ಶಕ್ತಿ ಕಾರ್ಯಕ್ರಮದ ವಿರುದ್ಧ ಖಾಸಗಿ ಸಾರಿಗೆ ಸಂಸ್ಥೆ ಸೆಪ್ಟೆಂಬರ್ 11 ರಂದು ‘ಬೆಂಗಳೂರು ಬಂದ್’ ಗೆ ಕರೆ ನೀಡಿದೆ.ಕಾರ್ಯನಿರ್ವಹಣೆಗೆ ಖಾಸಗಿ ಸಾರಿಗೆಯನ್ನೇ ಅವಲಂಬಿಸಿರುವ ಕೆಲವು ಶಾಲೆಗಳಿಗೆ ಮುಷ್ಕರದಿಂದ ಮಕ್ಕಳನ್ನು ಕರೆತರಲು ತೊಂದರೆ ಆಗುವ ಹಿನ್ನೆಲೆ ರಜೆ ಘೋಷಿಸಿವೆ. ಹೆಬ್ಬಾಳದ ವಿದ್ಯಾನಿಕೇತನ ಶಾಲೆ, ಆರ್ಕಿಡ್ ಆಡಳಿತ ಮಂಡಳಿಯವರು ರಜೆ ಘೋಷಿಸಿದ್ದಾರೆ. ಕರ್ನಾಟಕ ಖಾಸಗಿ ಶಾಲಾ ವಾಹನಗಳ ಯೂನಿಯನ್ ವತಿಯಿಂದ ಖಾಸಗಿ ಸಾರಿಗೆ ಮುಷ್ಕರಕ್ಕೆ ಬೆಂಬಲ ನೀಡಿದ್ದೇವೆ. ಈಗಾಗಲೇ ಅನೇಕ ಶಾಲೆಗಳು ರಜೆ ಘೋಷಣೆ ಮಾಡಿವೆಆದರೆ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ ಸಹ ಬಂದ್’ಗೆ ಬೆಂಬಲವನ್ನು ನೀಡಿದ್ದರೂ ಕೂಡ ಅದರ ಎಲ್ಲಾ ಸದಸ್ಯ ಶಾಲೆಗಳಿಗೆ ರಜೆ ಘೋಷಿಸಿಲ್ಲ.
ಕೇವಲ ಖಾಸಗಿ ಸಾರಿಗೆ ವ್ಯವಸ್ಥೆಯನ್ನು ಅವಲಂಬಿಸಿರುವ ಶಾಲೆಗಳು ರಜೆ ಘೋಷಿಸಿವೆ. ಎಲ್ಲಾ ಶಾಲೆಗಳಿಗೆ ಸಾರ್ವತ್ರಿಕ ರಜೆ ಇಲ್ಲ ಎಂದು ಸ್ಪಷ್ಟಪಡಿಸಿದೆ.ಸೋಮವಾರ ಬಂದ್ ದಿನ ಆಟೋ ರಿಕ್ಷಾಗಳು, ಓಲಾ, ಊಬರ್ ಆಟೋಗಳು, ಶಾಲಾ ಆಟೋಗಳು, ಕಂಪನಿಗಳ ಕ್ಯಾಬ್, ಏರ್ ಪೋರ್ಟ್ ಕ್ಯಾಬ್ಗಳು ರಸ್ತೆಗಿಳಿಯೋದು ಅನುಮಾನವಾಗಿದೆ .. ಸ್ಕೂಲ್ ವ್ಯಾನ್ಗಳು, ಖಾಸಗಿ ಬಸ್ಗಳು ಕೂಡ ಬಂದ್ಗೆ ಬೆಂಬಲ ಸೂಚಿಸಿದೆ.