BIG NEWS: ರಿಯಾಯಿತಿ ದಂಡ ಪಾವತಿ ಗಡುವು ಮುಕ್ತಾಯ; 9 ಕೋಟಿಗೂ ಅಧಿಕ ದಂಡದ ಹಣ ಸಂಗ್ರಹ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ರಿಯಾಯಿತಿ ದರದಲ್ಲಿ ದಂಡ ಪಾವತಿ ಗಡುವು ಮುಕ್ತಾಯವಾಗಿದ್ದು, 9 ಕೋಟಿಗೂ ಅಧಿಕ ದಂಡದ ಹಣವನ್ನು ಸಂಗ್ರಹಿಸಲಾಗಿದೆ.

ಶೇ.50ರಷ್ಟು ರಿಯಾಯಿತಿ ದಂಡ ಪಾವತಿ ಗಡುವು ಶನಿವಾರ ಮುಕ್ತಾಯವಾಗಿದ್ದು, ಒಂದೇ ದಿನದಲ್ಲಿ ವಾಹನ ಸವಾರರು ಕೋಟ್ಯಂತರ ರೂಪಾಯಿ ದಂಡ ಪವತಿಸಿದ್ದಾರೆ. ರಿಯಾಯಿತಿ ದಂಡ ಜಾರಿಯಾದಾಗಿನಿಂದ ಈವರೆಗೆ 9 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹವಾಗಿದೆ.

ಜುಲೈ 6ರಿಂದ ಸೆಪ್ಟೆಂಬರ್ 9ರವರೆಗೆ ಒಟ್ಟು 2,92,792 ಲಕ್ಷ ಪ್ರಕರಣಗಳಿಂದ ಬರೋಬ್ಬರಿ 9.24 ಕೋಟಿ ರೂಪಾಯಿಗೂ ಹೆಚ್ಚು ದಂಡ ಪಾವತಿಯಾಗಿದೆ ಎಂದು ಸಂಚಾರಿ ವಿಭಾಗದ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read