ನವದೆಹಲಿ: ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ಆಧಾರ್ ಕಾರ್ಡ್ ನವೀಕರಿಸುವ ಉದ್ದೇಶಕ್ಕಾಗಿ ತಮ್ಮ ಗುರುತಿನ ಅಥವಾ ವಿಳಾಸ ಪುರಾವೆ ದಾಖಲೆಗಳನ್ನು ಇಮೇಲ್ ಅಥವಾ ವಾಟ್ಸಾಪ್ ಮೂಲಕ ಹಂಚಿಕೊಳ್ಳದಂತೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ಜನರಿಗೆ ಎಚ್ಚರಿಕೆ ನೀಡಿದೆ.
ಈ ರೀತಿ ತಮ್ಮ ದಾಖಲೆಗಳನ್ನು ಹಂಚಿಕೊಳ್ಳಲು ವ್ಯಕ್ತಿಗಳನ್ನು ಎಂದಿಗೂ ಕೇಳುವುದಿಲ್ಲ ಮತ್ತು ಅಂತಹ ವಿನಂತಿಗಳು ಮೋಸದ ಸಾಧ್ಯತೆಯಿದೆ ಎಂದು ಪ್ರಾಧಿಕಾರ ಹೇಳಿದೆ.
UIDAI ಪ್ರಮುಖ ದಾಖಲೆಗಳನ್ನು ಹಂಚಿಕೊಳ್ಳಲು ಎಂದಿಗೂ ಕೇಳುವುದಿಲ್ಲ. ಯುಐಡಿಎಐ ನಿಮ್ಮ ಆಧಾರ್ ಅನ್ನು ಇಮೇಲ್ ಅಥವಾ ವಾಟ್ಸಾಪ್ ಮೂಲಕ ನವೀಕರಿಸಲು ನಿಮ್ಮ POI/POA ದಾಖಲೆಗಳನ್ನು ಹಂಚಿಕೊಳ್ಳಲು ಎಂದಿಗೂ ಕೇಳುವುದಿಲ್ಲ. myAadhaarPortal ಮೂಲಕ ಆನ್‌ಲೈನ್‌ನಲ್ಲಿ ನಿಮ್ಮ ಆಧಾರ್ ಅನ್ನು ನವೀಕರಿಸಿ ಅಥವಾ ನಿಮ್ಮ ಸಮೀಪದ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ ಎಂದು ಹೇಳಲಾಗಿದೆ.
ಕಳೆದ ವರ್ಷದ ಆರಂಭದಲ್ಲಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿನ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ), ಜನರು ತಮ್ಮ ಆಧಾರ್ ಕಾರ್ಡ್‌ಗಳ ಫೋಟೊಕಾಪಿಗಳನ್ನು ಯಾವುದೇ ಸಂಸ್ಥೆಗಳೊಂದಿಗೆ ಹಂಚಿಕೊಳ್ಳದಂತೆ ಸಲಹೆ ನೀಡಿತ್ತು. ಏಕೆಂದರೆ ಆಧಾರ್ ಕಾರ್ಡ್ ದುರ್ಬಳಕೆಯಾಗಬಹುದಾದ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿದೆ. ಬದಲಾಗಿ, ಜನರು ಮಾಸ್ಕ್ ಆಧಾರ್ ಅನ್ನು ಬಳಸಬಹುದು, ಅದು ಅವರ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳನ್ನು ಮಾತ್ರ ಪ್ರದರ್ಶಿಸುತ್ತದೆ.
“ಆಧಾರ್ ಕಾರ್ಡ್ ಅನ್ನು ಗುರುತನ್ನು ಸಾಬೀತುಪಡಿಸಲು ಮತ್ತು ವಹಿವಾಟುಗಳನ್ನು ಮಾಡಲು ಮುಕ್ತವಾಗಿ ಬಳಸಬೇಕು, ಆದರೆ, ಟ್ವಿಟರ್, ಫೇಸ್‌ಬುಕ್ ಮುಂತಾದ ಸಾರ್ವಜನಿಕ ವೇದಿಕೆಗಳಲ್ಲಿ ಹಾಕಬಾರದು. ಜನರು ಸರಕು, ಖರೀದಿಸುವಾಗ, ಶಾಲಾ ಶುಲ್ಕ, ನೀರು, ವಿದ್ಯುತ್, ದೂರವಾಣಿ ಮತ್ತು ಇತರ ಯುಟಿಲಿಟಿ ಬಿಲ್ ಗಳನ್ನು ಪಾವತಿಸಿ ತಮ್ಮ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳನ್ನು ಚೆಕ್ ಮಾಡುತ್ತಾರೆ.. ಹಾಗೆಯೇ, ಯಾವುದೇ ಭಯವಿಲ್ಲದೆ ಅಗತ್ಯವಿರುವಾಗ ನಿಮ್ಮ ಗುರುತನ್ನು ಸ್ಥಾಪಿಸಲು ನಿಮ್ಮ ಆಧಾರ್ ಅನ್ನು ನೀವು ಮುಕ್ತವಾಗಿ ಬಳಸಬಹುದು. ಆಧಾರ್ ಬಳಸುವಾಗ, ಇತರ ಐಡಿ ಕಾರ್ಡ್‌ಗಳ ವಿಷಯದಲ್ಲಿ ನೀವು ಮಾಡುವ ಅದೇ ಮಟ್ಟದ ಶ್ರದ್ಧೆ, ಪರಿಶೀಲನೆ ಇರಲಿ ಎಂದು ಯುಐಡಿಎಐ ಸುರಕ್ಷತಾ ಸೂಚನೆ ನೀಡಿದೆ.