alex Certify ಚಿತ್ರೀಕರಣದ ವೇಳೆ ಕುಪ್ಪಸ ತೆಗೆಯುವಂತೆ ನಟಿ ಮಾಧುರಿ ದೀಕ್ಷಿತ್ ಗೆ ಹೇಳಿದ್ದ ನಿರ್ದೇಶಕ; ಆಮೇಲೇನಾಯ್ತು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿತ್ರೀಕರಣದ ವೇಳೆ ಕುಪ್ಪಸ ತೆಗೆಯುವಂತೆ ನಟಿ ಮಾಧುರಿ ದೀಕ್ಷಿತ್ ಗೆ ಹೇಳಿದ್ದ ನಿರ್ದೇಶಕ; ಆಮೇಲೇನಾಯ್ತು ಗೊತ್ತಾ ?

1980ರ ದಶಕದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಅಭಿನಯದ ಕೆಲವು ಜನಪ್ರಿಯ ಚಲನಚಿತ್ರಗಳಾದ ಕಾಲಿಯಾ ಮತ್ತು ಶಾಹೆನ್‌ಶಾ ನಿರ್ಮಿಸಿದ ಟಿನು ಆನಂದ್, ಬಚ್ಚನ್ ಮತ್ತು ಮಾಧುರಿ ದೀಕ್ಷಿತ್ ಜೋಡಿಯನ್ನು ಮೊದಲ ಬಾರಿಗೆ ತೆರೆ ಮೇಲೆ ತರಲು 1989 ರಲ್ಲಿ ಶಾನಖ್ತ್ ಎಂಬ ಶೀರ್ಷಿಕೆಯ ಚಿತ್ರಕ್ಕೆ ಸಹಿ ಹಾಕಿಸಿದ್ರು.

ಆ ಸಮಯದಲ್ಲಿ, ಬಿಗ್ ಬಿ ಸ್ಟಾರ್ ಆಗಿದ್ದರು. ಮಾಧುರಿ ಕೂಡ ಆಗಷ್ಟೇ ಸ್ಟಾರ್‌ ನಟಿಯಾಗಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಟಿನು ಆನಂದ್, ಆ ಸಿನಿಮಾದ ಚಿತ್ರೀಕರಣದಲ್ಲಿ ನಡೆದಿದ್ದ ಘಟನೆಯ ಬಗ್ಗೆ ನೆನಪಿಸಿಕೊಂಡಿದ್ದಾರೆ. ಚಿತ್ರೀಕರಣದ ಮೊದಲ ದಿನದಂದು ಮಾಧುರಿಯೊಂದಿಗೆ ಅವರ ವೇಷಭೂಷಣದ ಬಗ್ಗೆ ಜಗಳವಾಡಿದ ಕುರಿತಾಗಿ ಅವರು ನೆನಪಿಸಿಕೊಂಡರು.

ರೇಡಿಯೋ ನಶಾ ಜೊತೆಗಿನ ಚಾಟ್‌ನಲ್ಲಿ, ಟಿನು ಅವರು ಶೂಟ್ ಮಾಡಲು ಹೊರಟಿರುವ ಮೊದಲ ದೃಶ್ಯದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ನಟಿ ಮಾಧುರಿಯವರಿಗೆ ಸಹಿ ಹಾಕುವ ಮುನ್ನ ಸಂಪೂರ್ಣ ಸೀಕ್ವೆನ್ಸ್ ಅನ್ನು ಹಂಚಿಕೊಂಡಿದ್ದೆ. ಕ್ಯಾಮರಾ ಮುಂದೆ ತನ್ನ ಕುಪ್ಪಸವನ್ನು ಬಿಚ್ಚಿ ಬ್ರಾದಲ್ಲಿ ನಿಲ್ಲಬೇಕು ಎಂದು ಹೇಳಿದ್ದಾಗಿ ತಿಳಿಸಿದ್ರು. ಸಿನಿಮಾದಲ್ಲಿ ಹೊಡೆದಾಟದ ದೃಶ್ಯವಿದ್ದುದರಿಂದ ಈ ರೀತಿ ಮಾಡಬೇಕಾಗಿತ್ತು. ಇದಕ್ಕೆ ಮಾಧುರಿ ಓಕೆ ಎಂದಿದ್ದರು ಎಂದು ವಿವರಿಸಿದ್ರು.

ಆದರೆ, ಚಿತ್ರದ ಮೊದಲ ದಿನದ ಚಿತ್ರೀಕರಣದಂದು ಸೆಟ್‌ಗೆ ಬಂದ ಮಾಧುರಿ, 45 ನಿಮಿಷಗಳವರೆಗೆ ತನ್ನ ಕೋಣೆಯಿಂದ ಹೊರಬಂದಿರಲಿಲ್ಲ. ಏನಾಯ್ತು ಎಂದು ನೋಡಲು ಹೋದಾಗ ನಟಿ ಇನ್ನೂ ತಯಾರಾಗಿರಲಿಲ್ಲ. ಯಾಕೆ ರೆಡಿಯಾಗಿಲ್ಲ ಎಂದು ಕೇಳಿದಾಗ ಆ ದೃಶ್ಯ ಮಾಡಲು ತನಗಿಷ್ಟವಿಲ್ಲ ಎಂದು ನಟಿ ಹೇಳಿದ್ರು. ಆ ದೃಶ್ಯ ಮಾಡಬೇಕು ಎಂದು ಕೇಳಿಕೊಂಡಾಗ, ಸಾಧ್ಯವೇ ಇಲ್ಲ ಎಂದು ಮಾಧುರಿ ಹೇಳಿದ್ರು. ಅದಕ್ಕೆ ಸಿಟ್ಟಾದ ತಾನು ಸರಿ ಹಾಗಿದ್ರೆ ಪ್ಯಾಕ್ ಅಪ್ ಮಾಡಿ, ಚಿತ್ರಕ್ಕೆ ಗುಡ್ ಬೈ ಹೇಳಿ. ನಾನು ಚಿತ್ರೀಕರಣವನ್ನು ರದ್ದುಗೊಳಿಸುತ್ತೇನೆ ಎಂದು ಟಿನು ಆನಂದ್ ಕೋಪಕೊಂಡರಂತೆ.

ಈ ವೇಳೆ ಸೆಟ್‌ಗೆ ಬಂದ ಅಮಿತಾಬ್ ಬಚ್ಚನ್ ಏನಾಗುತ್ತಿದೆ ಎಂದು ಕೇಳಿದಾಗ, ಮಾಧುರಿ ದೀಕ್ಷಿತ್ ಅವರೊಂದಿಗೆ ಜಗಳವಾಡಿದ್ದೇನೆ ಎಂದು ಟಿನು ಆನಂದ್ ಹೇಳಿದ್ರು. ಅಮಿತಾಬ್ ಅದಕ್ಕೆ ಶಾಂತಿ ಸಂಧಾನದ ಮಾತುಕತೆ ಮಾಡಿದ್ರು. ಆದರೆ, ಚಿತ್ರಕ್ಕೆ ಸಹಿ ಹಾಕುವ ಮುನ್ನವೇ ತಾನು ಈ ರೀತಿಯ ದೃಶ್ಯವಿರುತ್ತೆ ಎಂದು ಹೇಳಿದ್ದೆ. ಆಗ ಯಾಕಾಗಿ ಮತ್ತೆ ಸಹಿ ಹಾಕಿದ್ದು ಎಂದು ಅಮಿತಾಬ್ ರಲ್ಲಿ ಪ್ರಶ್ನಿಸಿದ್ರಂತೆ.

ಚಿತ್ರದಲ್ಲಿ ಮಾಧುರಿಯ ಬದಲಿಗೆ ಬೇರೆ ಯಾವ ನಟಿಯನ್ನು ಹಾಕುವುದು ಎಂದು ಯೋಚಿಸಲು ಪ್ರಾರಂಭಿಸಿದ್ರಂತೆ. ಆದರೆ, ಮಾಧುರಿಯ ಕಾರ್ಯದರ್ಶಿ ಒಳಗೆ ಬಂದು ನಟಿ ಆ ದೃಶ್ಯ ಮಾಡಲು ಒಪ್ಪಿಕೊಂಡಿದ್ದು, ಸ್ವಲ್ಪ ಸಮಯ ಕೊಡುವಂತೆ ಕೇಳಿಕೊಂಡರು ಎಂದು ತಿಳಿಸಿದ್ರು.

ಚಿತ್ರವನ್ನು ಕೇವಲ ಐದು ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಮನಮೋಹನ್ ದೇಸಾಯಿ ಅವರು ಚಲನಚಿತ್ರವನ್ನು ನೋಡಿ ಮೆಚ್ಚಿಕೊಂಡರಂತೆ. ಮುಂದೆ ಮಾಧುರಿ ಹಾಗೂ ಟಿನು ಯಾವುದೇ ಸಿನಿಮಾದಲ್ಲಿ ಕೆಲಸ ಮಾಡಲಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...