ಇತ್ತೀಚಿನ ದಿನಗಳಲ್ಲಿ ಮಾಂಸಹಾರ ಹಾಗೂ ಸಸ್ಯಹಾರದ ಕುರಿತು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಭೂಕುಸಿತ ಹಾಗೂ ಮೇಘ ಸ್ಫೋಟದಂತಹ ನೈಸರ್ಗಿಕ ವಿಪತ್ತು ಸಂಭವಿಸಲು ಮೂಕ ಪ್ರಾಣಿಗಳ ಹತ್ಯೆ ಹಾಗೂ ಮಾಂಸ ಭಕ್ಷಣೆಯೇ ಮೂಲಕ ಕಾರಣ ಎಂದು ಐಐಟಿ ನಿರ್ದೇಶಕ ಲಕ್ಷ್ಮೀಧರ್ ಬೆಹೆರಾ ಹೇಳಿದ್ದಾರೆ.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಐಐಟಿ – ಮಂಡಿ ನಿರ್ದೇಶಕ ಲಕ್ಷ್ಮೀಧರ್ ಬೆಹೆರಾ ಈ ಮಾತುಗಳನ್ನಾಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೆ ಇದು ಈಗ ಪರ – ವಿರೋಧದ ಚರ್ಚೆಯನ್ನು ಸಹ ಹುಟ್ಟು ಹಾಕಿದೆ.
ಮೂಕ ಪ್ರಾಣಿಗಳ ಹತ್ಯೆ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ನಿಸರ್ಗವೂ ಸಹ ಅವನತಿ ಹೊಂದಲಿದೆ. ಹಿಮಾಲಯ ಪ್ರದೇಶದಲ್ಲಿ ಭಾರಿ ಭೂಕುಸಿತ ಹಾಗೂ ಮೇಘ ಸ್ಪೋಟ ಸಂಭವಿಸಲು ಮಾಂಸ ಭಕ್ಷಣೆಯೇ ಕಾರಣ ಎಂದು ಲಕ್ಷ್ಮೀಧರ್ ಹೇಳಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.