2000 ರಲ್ಲಿ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದ ಜೆನ್ನಿಫರ್ ಲೋಪೆಜ್ ಅವರ ಹಸಿರು ಬಣ್ಣದ ಉಡುಗೆ ಸೆನ್ಸೇಷನ್ ಸೃಷ್ಟಿಸಿತ್ತು. ಈ ಸಂದರ್ಭದಲ್ಲೇ ಗೂಗಲ್‌ನಲ್ಲಿ ಚಿತ್ರವನ್ನು ಸಹ ಹುಡುಕುವ ಟೆಕ್ನಾಲಜಿಯನ್ನು ಪ್ರಾರಂಭಿಸಲಾಯಿತು.
ಆ ಸಂದರ್ಭದಲ್ಲಿ ಗೂಗಲ್‌ನಲ್ಲಿ ಉಡುಗೆ ಬಗೆಗೆ ಜನ ಕೇಳುವ ಪ್ರಶ್ನೆಗಳು ಹೆಚ್ಚು ಜನಪ್ರಿಯ ಹುಡುಕಾಟದ ಪ್ರಶ್ನೆಯಾಯಿತು. ಆದರೆ ಜನ ಕೇವಲ ಟೆಕ್ಸ್ಟ್ ರಿಸಲ್ಟ್ ಮಾತ್ರವಲ್ಲದೇ ಚಿತ್ರಗಳನ್ನು ಸಹ ಬಯಸಿದ್ದರು. ಈ ಬೇಡಿಕೆಯನ್ನು ಪೂರೈಸಲೆಂದೇ ಗೂಗಲ್ ಇಮೇಜ್ ಎಂಬ ಸರ್ಚ್ ಸಾಧನವನ್ನು ಪರಿಚಯಿಸಲಾಯಿತು. ಕಂಪನಿಯು 2001 ರಲ್ಲಿ ಈ ನೂತನ ವೈಶಿಷ್ಟ್ಯವನ್ನು ಹೊರತಂದಿದ್ದು ಮೊದಲ ದಿನದಿಂದಲೇ 250 ಮಿಲಿಯನ್ ಚಿತ್ರಗಳೊಂದಿಗೆ ಪ್ರಾರಂಭಿಸಲಾಯಿತು.
ಗ್ಯಾರೇಜ್‌ನಿಂದ ಟೆಕ್ ಟೈಟಾನ್‌ವರೆಗೆ ಬೆಳೆದು ನಿಂತಿರುವ ಗೂಗಲ್‌ನ್ನು ಸ್ಟಾರ್ಟ್ಅಪ್ ಯೋಜನೆಯಾಗಿ ಪ್ರಾರಂಭಿಸಲಾಯಿತು. ಗೂಗಲ್‌ನ ಮೊದಲ ಕಛೇರಿ ಬಾಡಿಗೆ ಗ್ಯಾರೇಜ್ ಆಗಿತ್ತು. ಈಗ ಯೂಟ್ಯೂಬ್‌ನ CEO ಆಗಿರುವ ವೊಜ್ಸಿಕಿ, ಗೂಗಲ್‌ನ ಮೊದಲ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದರು. ಇನ್ನು ಗೂಗಲ್‌ನ ಇಮೇಲ್ ಸೇವೆಯಾದ ಜಿಮೇಲ್‌ನ್ನು 2004 ರಲ್ಲಿ ಏಪ್ರಿಲ್ ಫೂಲ್ ದಿನದಂದು ಪ್ರಾರಂಭಿಸಲಾಯಿತು. ಈ ಘೋಷಣೆಯನ್ನು ಅನೇಕರು ಆರಂಭದಲ್ಲಿ ತಮಾಷೆ ಎಂದು ಭಾವಿಸಿದ್ದರು. ಆದ್ರೆ ಆ ಬಳಿಕ ಇದು ಯಶಸ್ವಿಯಾಗಿ ಹೊರಹೊಮ್ಮಿತು. ಸದ್ಯ ಪ್ರತಿದಿನ ವಿಶ್ವದಾದ್ಯಂತ ಕೋಟ್ಯಾಂತರ ಜನರಿಗೆ ಸೇವೆಯನ್ನು ಜಿಮೇಲ್ ನೀಡುತ್ತಿದೆ.