
ಆಗಸ್ಟ್ ತಿಂಗಳೊಂದರಲ್ಲೇ ಕರ್ನಾಟಕದಲ್ಲಿ ಒಟ್ಟು 795 ರಸ್ತೆ ಅಪಘಾತಗಳು ಸಂಭವಿಸಿವೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ಸುರಕ್ಷತೆ) ಅಲೋಕ್ ಕುಮಾರ್ ಬಹಿರಂಗಪಡಿಸಿದ್ದಾರೆ. ಹಿಂದಿನ ತಿಂಗಳ ಅಂಕಿಅಂಶಗಳಿಗೆ ಹೋಲಿಸಿದರೆ ಮಾರಣಾಂತಿಕ ಅಪಘಾತಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.
ಮೇ ತಿಂಗಳಲ್ಲಿ ಒಟ್ಟು 1094 ಮಾರಣಾಂತಿಕ ರಸ್ತೆ ಅಪಘಾತಗಳು ದಾಖಲಾಗಿದ್ದರೆ, ಜೂನ್ ಮತ್ತು ಜುಲೈನಲ್ಲಿ ಈ ಸಂಖ್ಯೆ 965 ಮತ್ತು 807 ರಷ್ಟಿತ್ತು. ರಾಜ್ಯದಲ್ಲಿ ರಸ್ತೆ ಅಪಘಾತಗಳಿಂದ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ. ಮೇ-1094, ಜೂನ್-965, ಜುಲೈ-807, ಆಗಸ್ಟ್ ನಲ್ಲಿ 795 ಜನ ಮೃತಪಟ್ಟಿದ್ದಾರೆ. ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದವರಲ್ಲಿ ಶೇಕಡಾ 60 ರಷ್ಟು ಜನ ಬೈಕ್ ಸವಾರರು ಎಂಬುದು ತಿಳಿದು ಬಂದಿದೆ.
ಮಾರಣಾಂತಿಕ ಅಪಘಾತಗಳ ದತ್ತಾಂಶದಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ನಗರ ಪ್ರದೇಶಗಳು ಸಿಂಹಪಾಲು ಹೊಂದಿವೆ ಎಂದು ಅವರು ಹೇಳಿದರು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಪ್ರಮುಖ ಕೊಡುಗೆ ನೀಡಿವೆ. 2023 ರ ಮೊದಲಾರ್ಧದಲ್ಲಿ – 5830 ಸಾವುಗಳು. ಅಸಂಖ್ಯಾತ ಅಮೂಲ್ಯ ಜೀವಗಳನ್ನು ಉಳಿಸಲು ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಕಾರ್ಯತಂತ್ರಕ್ಕೆ ಸೂಕ್ತ ಗಮನ ನೀಡಬೇಕು” ಎಂದು ಅವರು ಹೇಳಿದರು.
Trying hard
Deaths due to road accidents in state-
May – 1094
June- 965
July- 807
Aug-795Bangalore City, Bangalore Rural & Tumkur major contributors
1 st half of 2023- 5830 deaths
“ Road accidents reduction strategy must get due focus to save innumerable precious lives”
— alok kumar (@alokkumar6994) September 4, 2023

