ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ಫ್ಲಿಪ್ಕಾರ್ಟ್ ಭರ್ಜರಿ ಸಿಹಿಸುದ್ದಿ ನೀಡಿದ್ದು, ಹಬ್ಬದ ಋತುವಿಗೆ ಮುಂಚಿತವಾಗಿ ಒಂದು ಲಕ್ಷಕ್ಕೂ ಹೆಚ್ಚು ತಾತ್ಕಾಲಿಕ ಉದ್ಯೋಗಗಳನ್ನು ಸೃಷ್ಟಿಸಲು ಫ್ಲಿಪ್ಕಾರ್ಟ್ ಯೋಜಿಸಿದೆ.
ಫ್ಲಿಪ್ಕಾರ್ಟ್ ಗ್ರೂಪ್ನ ಹಿರಿಯ ಉಪಾಧ್ಯಕ್ಷ ಹೇಮಂತ್ ಬದ್ರಿ ಮಾತನಾಡಿ, “ಬಿಗ್ ಬಿಲಿಯನ್ ಡೇಸ್ ದೊಡ್ಡ ಪ್ರಮಾಣದ ಮಾರಾಟವಾಗಿದೆ. ಬೇಡಿಕೆಯನ್ನು ಪೂರೈಸಲು ಪೂರೈಕೆ ಸರಪಳಿಯಲ್ಲಿ ಈ ನೇಮಕಾತಿಗಳನ್ನು ಮಾಡಲಾಗುತ್ತದೆ. ಮಹಿಳೆಯರು ಮತ್ತು ಅಂಗವಿಕಲರನ್ನು ಸಹ ಉದ್ಯೋಗದ ಭಾಗವಾಗಿಸಲಾಗುವುದು ಎಂದು ಹೇಳಿದ್ದಾರೆ.
ತೈಲ ಮತ್ತು ಅನಿಲ ಕಂಪನಿಗಳು 2023 ರ ಆಗಸ್ಟ್ನಲ್ಲಿ ಒಂದು ವರ್ಷದ ಹಿಂದೆ ಹೋಲಿಸಿದರೆ ಶೇಕಡಾ 17 ರಷ್ಟು ಹೆಚ್ಚು ನೇಮಕಾತಿ ಮಾಡಿಕೊಂಡಿವೆ. ಆತಿಥ್ಯ ವಲಯ ಶೇ.14, ಫಾರ್ಮಾ ಶೇ.12 ಮತ್ತು ಕೃತಕ ಬುದ್ಧಿಮತ್ತೆ ಶೇ.8ರಷ್ಟು ಏರಿಕೆ ಕಂಡಿವೆ.
ಈ ವರ್ಷದ ಆಗಸ್ಟ್ನಲ್ಲಿ 2,666 ಉದ್ಯೋಗಗಳು ಸೃಷ್ಟಿಯಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 2,828 ಉದ್ಯೋಗಗಳು ಸೃಷ್ಟಿಯಾಗಿದ್ದವು. ನೌಕರಿ ಜಾಬ್ಸ್ಪೀಕ್ ಸೂಚ್ಯಂಕದ ಪ್ರಕಾರ, ಮಾಸಿಕ ಆಧಾರದ ಮೇಲೆ, ಆಗಸ್ಟ್ 2023 ರಲ್ಲಿ ಉದ್ಯೋಗಗಳಲ್ಲಿ ಶೇಕಡಾ 4 ರಷ್ಟು ಬೆಳವಣಿಗೆ ಕಂಡುಬಂದಿದೆ. 2023ರ ಜುಲೈನಲ್ಲಿ 2,573 ಉದ್ಯೋಗಗಳು ಸೃಷ್ಟಿಯಾಗಿದ್ದವು.
ಐಟಿಯಲ್ಲಿ ಅತಿದೊಡ್ಡ ಕುಸಿತ
ಐಟಿ ವಲಯವು ಆಗಸ್ಟ್ 2023 ರಲ್ಲಿ ನೇಮಕಾತಿಯಲ್ಲಿ ಶೇಕಡಾ 33 ರಷ್ಟು ಕುಸಿತವನ್ನು ಕಂಡಿದೆ. ವಿಮಾ ವಲಯ ಶೇ.19, ಆಟೋ ಶೇ.14, ಹೆಲ್ತ್ ಕೇರ್ ಶೇ.12 ಮತ್ತು ಬಿಪಿಒ ಶೇ.10ರಷ್ಟು ಕುಸಿತ ಕಂಡಿವೆ.