ವಾಸ್ತವವಾಗಿ, ಡಿಜಿಟಲ್ ವೋಡರ್ ಐಡಿ ಕಾರ್ಡ್ 2022 ರ ನಂತರ ನೋಂದಾಯಿತ ಮತದಾರರಿಗೆ ಮಾತ್ರ ಲಭ್ಯವಿತ್ತು. ಆದರೆ ಈಗ ಈ ಸೌಲಭ್ಯವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಲಾಗಿದೆ.
ಈ ವಿಧಾನದಿಂದ, ಮತದಾರರ ಕಾರ್ಡ್ ಅನ್ನು ಮೊದಲು ಡಿಜಿಟಲ್ ರೂಪದಲ್ಲಿ ಡೌನ್ಲೋಡ್ ಮಾಡಬಹುದು ಮತ್ತು ನಂತರ ಡಿಜಿಲಾಕರ್ ಅಪ್ಲಿಕೇಶನ್ ನಲ್ಲಿ ಉಳಿಸಬಹುದು.
ಈ ಡಿಜಿಟಲ್ ಮತದಾರರ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ?
1) ಮೊದಲು ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ voters.eci.gov.in ವೆಬ್ ಸೈಟ್ ಗೆ ಹೋಗಿ
2) ನೀವು ಇದೇ ಮೊದಲು ಈ ಪೋರ್ಟಲ್ ಬಳಸುತ್ತಿದ್ದರೆ, ಫೋನ್ ನಂಬರ್ ಮೂಲಕ ರಿಜಿಸ್ಟರ್ ಆಗಿ. ಒಮ್ಮೆ ನೀವು ಪೋರ್ಟಲ್ಗೆ ಎಂಟ್ರಿ ಕೊಟ್ಟಾಗ, ಡೌನ್ಲೋಡ್ ಇ-ಎಪಿಕ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ EPIC ಸಂಖ್ಯೆಯನ್ನು ಅಲ್ಲಿ ನಮೂದಿಸಿ. ನಂತರ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ.
3) ಒಟಿಪಿಯನ್ನು ನಮೂದಿಸಿದ ನಂತರ, ಮತದಾರರ ಕಾರ್ಡ್ ಅನ್ನು ಡಿಜಿಟಲ್ ರೂಪದಲ್ಲಿ ಡೌನ್ಲೋಡ್ ಮಾಡಬಹುದು. ನಂತರ ನೀವು ಅದನ್ನು ಡಿಜಿಟಲ್ ಲಾಕರ್ ನಲ್ಲಿ ಉಳಿಸಬಹುದು. ಅಥವಾ ನೀವು ಪ್ರಿಂಟ್ ಔಟ್ ಸಹ ತೆಗೆದುಕೊಳ್ಳಬಹುದು.