ಚಂದ್ರಯಾನ-3 ಬಗ್ಗೆ ಇಸ್ರೋ ಮತ್ತೊಂದು ಬಿಗ್ ಅಪ್ ಡೇಟ್ ನೀಡಿದೆ. ಹೌದು, ಚಂದ್ರಯಾನ-3 ಮಿಷನ್ ನ ಪ್ರಗ್ಯಾನ್ ರೋವರ್ ತನ್ನ ಕೆಲಸವನ್ನು ಪೂರ್ಣಗೊಳಿಸಿದೆ. ಪ್ರಗ್ಯಾನ್ ರೋವರ್ ಅನ್ನು ಸ್ಲೀಪ್ ಮೋಡ್ನಲ್ಲಿ ಇರಿಸಲಾಗಿದೆ ಎಂದು ಇಸ್ರೋ (ISRO) ಮಾಹಿತಿ ನೀಡಿದೆ.
ರೋವರ್ ತನ್ನ ಕಾರ್ಯಯೋಜನೆಗಳನ್ನು ಪೂರ್ಣಗೊಳಿಸಿತು.ಇದನ್ನು ಈಗ ಸುರಕ್ಷಿತವಾಗಿ ಪಾರ್ಕ್ ಮಾಡಲಾಗಿದೆ ಮತ್ತು ಸ್ಲೀಪ್ ಮೋಡ್ ಗೆ ಹೊಂದಿಸಲಾಗಿದೆ.APXS ಮತ್ತು LIBS ಪೇಲೋಡ್ ಗಳನ್ನು ಆಫ್ ಮಾಡಲಾಗಿದೆ. ಈ ಪೇಲೋಡ್ ಗಳಿಂದ ಡೇಟಾವನ್ನು ಲ್ಯಾಂಡರ್ ಮೂಲಕ ಭೂಮಿಗೆ ರವಾನಿಸಲಾಗುತ್ತದೆ.ಪ್ರಸ್ತುತ, ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಿದೆ.ಸೆಪ್ಟೆಂಬರ್ 22, 2023 ರಂದು ನಿರೀಕ್ಷಿಸಲಾದ ಮುಂದಿನ ಸೂರ್ಯೋದಯದಲ್ಲಿ ಬೆಳಕನ್ನು ಸ್ವೀಕರಿಸುವ ಉದ್ದೇಶವನ್ನು ಹೊಂದಿದೆ ಎಂದು ಟ್ವೀಟ್ ಮಾಡಿದೆ.
ಪ್ರಗ್ಯಾನ್ ರೋವರ್ ಅನ್ನು ಚಂದ್ರನ ಮೇಲೆ ಸೂರ್ಯಾಸ್ತದ ನಂತರ ಸ್ಲೀಪ್ ಮೋಡ್ಗೆ ಕಳುಹಿಸಲಾಗಿದೆ. ಆದರೆ, ಪ್ರಗ್ಯಾನ್ ರೋವರ್ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಿದೆ ಎಂದು ಇಸ್ರೋ ತಿಳಿಸಿದೆ.ಅದರ ಪೇಲೋಡ್ಗಳಾದ APXS ಮತ್ತು LIBS ಎರಡನ್ನೂ ಸ್ಥಗಿತಗೊಳಿಸಲಾಗಿದೆ. ಲ್ಯಾಂಡರ್ ಮೂಲಕ ಭೂಮಿಯ ಮೇಲೆ ಪೇಲೋಡ್ ನ ಎಲ್ಲಾ ಡೇಟಾವನ್ನು ಸ್ವೀಕರಿಸಲಾಗಿದೆ ಎಂದಿದೆ.