alex Certify BIG NEWS:‌ ಹೈದ್ರಾಬಾದ್‌ನಲ್ಲಿ ಆತಂಕ ಹುಟ್ಟಿಸಿದೆ ಹೊಸ ಅಪರಿಚಿತ ವೈರಸ್‌; ಸೋಂಕಿತರಿಗೆ ತಜ್ಞರು ನೀಡಿದ್ದಾರೆ ಈ ಎಚ್ಚರಿಕೆ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:‌ ಹೈದ್ರಾಬಾದ್‌ನಲ್ಲಿ ಆತಂಕ ಹುಟ್ಟಿಸಿದೆ ಹೊಸ ಅಪರಿಚಿತ ವೈರಸ್‌; ಸೋಂಕಿತರಿಗೆ ತಜ್ಞರು ನೀಡಿದ್ದಾರೆ ಈ ಎಚ್ಚರಿಕೆ !

ಹೈದರಾಬಾದ್‌ನಲ್ಲಿ ನಿಗೂಢ ವೈರಸ್ ಒಂದು ಸಂಚಲನ ಮೂಡಿಸಿದೆ. ಇದರ ಆರಂಭಿಕ ಲಕ್ಷಣಗಳು ‘ಹಂದಿ ಜ್ವರ’, ‘ಅಡೆನೊವೈರಸ್’ ಮತ್ತು ‘ಇನ್‌ಫ್ಲುಯೆಂಜಾ’ದ ಲಕ್ಷಣಗಳನ್ನು ಹೋಲುತ್ತವೆ. ಇದು ಸೋಂಕಿತರಲ್ಲಿ ಉಸಿರಾಟದ ಸಮಸ್ಯೆ ಉಂಟುಮಾಡುತ್ತದೆ.

ಈ ವೈರಸ್‌ ಯಾವುದು ಅನ್ನೋದು ಇನ್ನೂ ದೃಢಪಟ್ಟಿಲ್ಲ. ಈ ವೈರಸ್ ರಾಜ್ಯಾದ್ಯಂತ ವೇಗವಾಗಿ ಹರಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ತಜ್ಞರ ಪ್ರಕಾರ, ಈ ನಿಗೂಢ ವೈರಸ್‌ನಿಂದ ಚೇತರಿಸಿಕೊಳ್ಳುವ ಪ್ರಮಾಣವು 100 ಪ್ರತಿಶತದಷ್ಟಿದೆ, ಹಾಗಾಗಿ ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ. ವೈರಸ್‌ನಿಂದ ಸೋಂಕಿಗೊಳಗಾದವರು 4-5 ದಿನಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. H3N2 ಸೋಂಕು ಕೂಡ 50 ಪ್ರತಿಶತದಷ್ಟು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಿದೆ.

ನಿಗೂಢ ವೈರಸ್‌ನ ಲಕ್ಷಣಗಳು

ಗಂಟಲು ಕೆರೆತ

ಮೂಗು ಸೋರುವಿಕೆ

ಜ್ವರ

ಮೈಕೈ ನೋವು

ಒಣ ಕೆಮ್ಮು

ಉಸಿರಾಟದ ಸಮಸ್ಯೆ

ತಜ್ಞರ ಪ್ರಕಾರ ಹೊಸ ವೈರಸ್‌ ಸೋಂಕಿಗೆ ತುತ್ತಾದವರಲ್ಲಿ 1-2 ಪ್ರತಿಶತದಷ್ಟು ಜನರು ತೀವ್ರ ಉಸಿರಾಟದ ತೊಂದರೆ ಎದುರಿಸುತ್ತಿದ್ದಾರೆ. ರೋಗಲಕ್ಷಣಗಳು ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಮೇಲೆ ಪರಿಣಾಮ ಬೀರಬಹುದು ಮತ್ತು ಕೆಳಗಿನ ಉಸಿರಾಟದ ಪ್ರದೇಶಕ್ಕೆ ಹರಡಬಹುದು ಎಂದು ವೈದ್ಯರು ಹೇಳಿದ್ದಾರೆ. ಇನ್‌ಫ್ಲುಯೆಂಜಾ A ಮತ್ತು B, ಹಂದಿ ಜ್ವರ-H1N1, ಡೆಂಗ್ಯೂ ಮತ್ತು ಏವಿಯನ್ ಫ್ಲೂ-H3N2 ನಲ್ಲಿಯೂ ಇದೇ ತೆರನಾದ ರೋಗ ಲಕ್ಷಣಗಳಿವೆ. ಹೊಸದಾಗಿ ಪತ್ತೆಯಾಗಿರೋ ಮಿಸ್ಟರಿ ವೈರಸ್‌ನ ರಚನಾತ್ಮಕ ಹೋಲಿಕೆಯು ಇತರ ವೈರಸ್ಗಳಂತೆಯೇ ಇದೆ.

ಈ ನಿಗೂಢ ವೈರಸ್‌ನಿಂದ ರಕ್ಷಣೆ ಪಡೆಯಲು ಕೆಮ್ಮುವಾಗ ಅಥವಾ ಸೀನುವಾಗ ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಳ್ಳಿ. n95 ಮಾಸ್ಕ್ ಬಳಸಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಇನ್‌ಫ್ಲುಯೆಂಜಾ ವಿರುದ್ಧ ವ್ಯಾಕ್ಸಿನೇಷನ್ ಪಡೆಯುವುದು ಉತ್ತಮ.

ನಿಗೂಢ ವೈರಸ್‌ಗೆ ಚಿಕಿತ್ಸೆ

ನಿಗೂಢ ವೈರಸ್‌ಗೆ ಯಾವ ರೀತಿಯ ಚಿಕಿತ್ಸೆ ಉತ್ತಮ ಎಂಬ ಬಗ್ಗೆ ಅಧ್ಯಯನ ನಡೆಯುತ್ತಿದೆ. ಉಸಿರಾಟದ ತೊಂದರೆ ಇರುವವರಿಗೆ ಒಸೆಲ್ಟಾಮಿವಿರ್ ಎಂಬ ಆಂಟಿವೈರಲ್ ಔಷಧದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳು ದೇಹವನ್ನು ಹೈಡ್ರೇಟ್‌ ಆಗಿಟ್ಟುಕೊಳ್ಳಬೇಕು. ಚೆನ್ನಾಗಿ ನೀರು ಕುಡಿಯಬೇಕು. ಸೋಂಕಿನಿಂದ ಚೇತರಿಸಿಕೊಳ್ಳುವವವರೆಗೂ ಪ್ರತ್ಯೇಕವಾಗಿರುವುದು ಉತ್ತಮ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...