ಗಮನಿಸಿ : ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

ಶಿವಮೊಗ್ಗ : ಶಿವಮೊಗ್ಗ ಅನೌಪಚಾರಿಕ ಪಡಿತರ ಪ್ರದೇಶ ವ್ಯಾಪ್ತಿಯಲ್ಲಿ ಹೊಸದಾಗಿ ಮೂರು ನ್ಯಾಯಬೆಲೆ ಅಂಗಡಿ ತೆರೆಯಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಸೂಳೇಬೈಲು ಮುಖ್ಯರಸ್ತೆಯ ಮತ್ತೂರು ಸೊಸೈಟಿಯ ಅಕ್ಕ-ಪಕ್ಕ, ಗೋಪಾಳ ಮುಖ್ಯರಸ್ತೆಯ ದ್ರೌಪದಮ್ಮ ಸರ್ಕಲ್ನ ವಿಜಯನಗರದ ಎಡಭಾಗ ಮತ್ತು ಮತ್ತೂರು ಸೂಳೇಬೈಲು ರಸ್ತೆಯ ಇಂದ್ರಾನಗರ ಅರಳಿಕಟ್ಟೆ ರಸ್ತೆಯ ಅಕ್ಕ-ಪಕ್ಕ ಸ್ಥಳಗಳಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ಆರಂಭಿಸಲು ಆಸಕ್ತ ಅರ್ಹರು ಶಿವಮೊಗ್ಗ ಅನೌಪಚಾರಿಕ ಪಡಿತರ ಪ್ರದೇಶ ಅಥವಾ ಉಪನಿರ್ದೇಶಕರ ಕಚೇರಿಯಿಂದ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಸೆ.30 ರೊಳಗಾಗಿ ಸಲ್ಲಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read