ಬೆಂಗಳೂರು : ಚಂದ್ರಯಾನ-3 ಯಶಸ್ವಿಯಾಗಿದ್ದು, ಚಂದ್ರನ ಅಂಗಳದಲ್ಲಿ ಪ್ರಜ್ಞಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ಅಧ್ಯಯನ ನಡೆಸುತ್ತಿದ್ದು, ಚಂದ್ರನ ಅಂಗಳದಲ್ಲಿ ಅಜೇಯವಾಗಿ ಪ್ರಜ್ಞಾನ್ ರೋವರ್ ಭರ್ಜರಿ ಶತಕ ಬಾರಿಸಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.
ಪ್ರಗ್ಯಾನ್ 100 ನಾಟೌಟ್, ಚಂದ್ರನ ಮೇಲೆ, ಪ್ರಗನ್ ರೋವರ್ 100 ಮೀಟರ್ ಗಿಂತಲೂ ಹೆಚ್ಚು ಪ್ರಯಾಣಿಸಿದೆ ಮತ್ತು ಮುಂದುವರಿಯುತ್ತಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.
ಆಗಸ್ಟ್ 23 ರಂದು ಸಂಜೆ 6.04 ಕ್ಕೆ ಚಂದ್ರಯಾನ -3 ಚಂದ್ರನ ಮೇಲೆ ಇಳಿಯಿತು. ಬುಧವಾರ ಚಂದ್ರಯಾನ 3 ಅನ್ನು ಇಳಿಸುವ ಮೂಲಕ ಭಾರತ ಇತಿಹಾಸ ನಿರ್ಮಿಸಿದೆ. ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.