ಕೋಲಾರ: ತಿರುಪತಿ ದೇವಾಲಯಕ್ಕೆ ಹೋಗಿ ವಾಪಸ್ ಆಗುತ್ತಿದ್ದಾಗ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಡಿವೈ ಎಸ್ ಪಿ ಓರ್ವರ ತಂದೆ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.
ಹುಣಸೂರು ಅಬಕಾರಿ ಡಿವೈ ಎಸ್ ಪಿ ವಿಜಯ್ ಕುಮಾರ್ ಅವರ ತಂದೆ ಗಿರಿಗೌಡ (80) ಮೃತರು. ಘಟನೆಯಲ್ಲಿ ಡಿವೈ ಎಸ್ ಪಿ ವಿಜಯ್ ಕುಮಾರ್, ಅವರ ತಾಯಿ, ಅಬಕಾರಿ ಇನ್ಸ್ ಪೆಕ್ಟರ್ ಲೋಕೇಶ್ ಮೂವರು ಗಯಗೊಂಡಿದ್ದಾರೆ. ವಿಜಯ್ ಕುಮಾರ್ ಅವರ ಎರಡು ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ಅವರ ತಾಯಿಯ ತಲೆಗೂ ತೀವ್ರ ಪೆಟ್ಟಾಗಿದೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯ್ ಕುಮಾರ್ ಕುಟುಂಬ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಾಪಸ್ ಆಗುತ್ತಿದ್ದಾಗ ಆಂಧ್ರದ ಪಲಮನೇರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರು ಅಪಘಾತಕ್ಕೀಡಾಗಿದೆ.