ಬಾಗಲಕೋಟೆ: ಹೆಸರುಕಾಳಿಗೆ ಬಂಪರ್ ಬೆಲೆ ಬಂದಿದ್ದು, ಮೂರು ವರ್ಷಗಳಲ್ಲಿಯೇ ಉತ್ತಮ ದರ ದೊರೆತಿದೆ. ಪ್ರತಿ ಕ್ವಿಂಟಲ್ ಗೆ 12.300 ರೂ.ಗೆ ಮಾರಾಟವಾಗುತ್ತಿದೆ.
ಬಾಗಲಕೋಟೆ ಎಪಿಎಂಸಿಯಲ್ಲಿ ವರ್ತಕರು ಮುಗಿಬಿದ್ದು ಹೆಸರು ಕಾಳು ಖರೀದಿಸುತ್ತಿದ್ದು, ಇದರಿಂದಾಗಿ ರೈತರಿಂದ ಸಂತಸ ವ್ಯಕ್ತವಾಗಿದೆ.
ಹೆಸರುಕಾಳಿಗೆ ಉತ್ತಮ ಬೆಲೆ ಸಿಕ್ಕಿದ್ದರೂ ಇಳುವರಿ ಕಡಿಮೆಯಾಗಿದೆ. ಮಳೆ ಕೊರತೆ ಸೇರಿದಂತೆ ಹಲವು ಸಮಸ್ಯೆ ಕಾರಣದಿಂದ ಈ ಬಾರಿ ಬಹುತೇಕ ರೈತರು ಹೆಸರು ಕಾಳು ಬೆಳೆದಿಲ್ಲ. ಈ ಬಾರಿ ಮುಂಗಾರು ಮಳೆ ಜೂನ್ ತಿಂಗಳಲ್ಲಿ ಸರಿಯಾಗಿ ಆಗದ ಕಾರಣ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಇಳುವರಿ ಕುಸಿತವಾಗಿ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ದರ ಹೆಚ್ಚಳವಾಗಿದೆ.
ಆಗಸ್ಟ್ ಮೊದಲ ವಾರದಿಂದ ಎಪಿಎಂಸಿಗೆ ಹೆಸರುಕಾಳು ಬರತೊಡಗಿದ್ದು, ಪ್ರತಿ ಕ್ವಿಂಟಲ್ ಗೆ 8,000 ರೂ.ವರೆಗೂ ಮಾರಾಟವಾಗಿತ್ತು. ಈಗ 12,300 ರೂ.ಗೆ ಏರಿಕೆಯಾಗಿದೆ. ಹಿಂದಿನ ವರ್ಷಗಳಲ್ಲಿ 4500 ರೂ.ನಿಂದ 7500 ರೂ. ದರ ಇತ್ತು.