ವಾಷಿಂಗ್ಟನ್: ಭಾರತ ವಿಶ್ವದ ಪ್ರಭಾವಿ ದೇಶವಾಗಿದ್ದು, ಪ್ರಧಾನಿ ಮೋದಿ ಅವರಿಗೆ ಶೇಕಡ 80ರಷ್ಟು ಭಾರತೀಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಚಿಂತಕರ ಚಾವಡಿಯ ಸಂಶೋಧನಾ ವಿಭಾಗದ ಸಮೀಕ್ಷೆಯೊಂದರಲ್ಲಿ ಈ ಮಾಹಿತಿ ಗೊತ್ತಾಗಿದೆ.
ಅಮೆರಿಕ ಚಿಂತಕರ ಚಾವಡಿಯಾಗಿರುವ ಪ್ಯೂ ರಿಸರ್ಚ್ ಸೆಂಟರ್ ಸರ್ವೆ ನಡೆಸಿದ್ದು, ಇದರಲ್ಲಿ ಶೇಕಡ 80ರಷ್ಟು ಮಂದಿ ಪ್ರಧಾನಿ ಮೋದಿಯವರ ಪರ ಒಲವು ವ್ಯಕ್ತಪಡಿಸಿದ್ದಾರೆ. ಶೇಕಡ 70ರಷ್ಟು ಭಾರತೀಯರು ಭಾರತ ವಿಶ್ವದ ಪ್ರಭಾವಿ ದೇಶವಾಗಿ ಹೊರ ಹೊಮ್ಮಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ವಿಶ್ವದ ಇತರೆ 23 ದೇಶಗಳ 30,800 ಮಂದಿ ಭಾರತೀಯರನ್ನು ಸಂದರ್ಶಿಸಿ ಈ ಸಮೀಕ್ಷೆ ಸಿದ್ಧಪಡಿಸಲಾಗಿದೆ. ಸಮೀಕ್ಷೆಯಲ್ಲಿ ವಯಸ್ಕರು, 24 ದೇಶಗಳಲ್ಲಿ ಇರುವ ಭಾರತೀಯರು ಪಾಲ್ಗೊಂಡಿದ್ದು, ಶೇಕಡ 80ರಷ್ಟು ಮಂದಿ ಮೋದಿ ಪರವಾಗಿದ್ದಾರೆ. ಶೇಕಡ 55 ರಷ್ಟು ಜನ ಅತಿ ಹೆಚ್ಚಾಗಿ ಮೋದಿಯನ್ನು ಬೆಂಬಲಿಸಿದ್ದಾರೆ.
ಲೋಕಸಭೆಗೆ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಅಮೆರಿಕ ಸಂಸ್ಥೆ ಈ ಸಮೀಕ್ಷೆ ನಡೆಸಿದ್ದು, ಮೋದಿ ವಿಶ್ವನಾಯಕ. ಭಾರತ ವಿಶ್ವದಲ್ಲೇ ಪ್ರಭಾವಿ ಎಂಬುದನ್ನು ಸಮೀಕ್ಷೆ ಸಾಬೀತುಪಡಿಸಿರುವುದಾಗಿ ಹೇಳಲಾಗಿದೆ.