ಬೆಂಗಳೂರು : ಚಂದ್ರಯಾನ -3 ರೋವರ್ ಪ್ರಜ್ಞಾನ್ ಇಂದು ಲ್ಯಾಂಡರ್ ವಿಕ್ರಮ್ ನ ಚಿತ್ರವನ್ನು ಹಂಚಿಕೊಂಡಿದ್ದು, ಇದು ತನ್ನ ನ್ಯಾವಿಗೇಷನ್ ಕ್ಯಾಮೆರಾವನ್ನು ಬಳಸಿಕೊಂಡು ಕ್ಲಿಕ್ ಮಾಡಿದ ಮೊದಲ ಫೋಟೋ ಆಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಇಸ್ರೋ, ಚಂದ್ರನ ಮೇಲೆ ಇಳಿದ ನಂತರ ರೋವರ್ ಕ್ಲಿಕ್ ಮಾಡಿದ ಮೊದಲ ಚಿತ್ರ ಇದಾಗಿದೆ. ಇಲ್ಲಿಯವರೆಗೆ, ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ವಿಕ್ರಮ್ ಸೆರೆಹಿಡಿದಿದ್ದಾನೆ.ಈ ಫೋಟೋವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಇದನ್ನು “ಮಿಷನ್ನ ಚಿತ್ರ” ಎಂದು ಕರೆದಿದೆ.
ರೋವರ್ ನಲ್ಲಿರುವ ನವ್ ಕ್ಯಾಮ್ ಗಳನ್ನು ಬೆಂಗಳೂರಿನ ಲ್ಯಾಬೊರೇಟರಿ ಫಾರ್ ಎಲೆಕ್ಟ್ರೋ-ಆಪ್ಟಿಕ್ಸ್ ಸಿಸ್ಟಮ್ಸ್ (ಲಿಯೋಸ್) ಅಭಿವೃದ್ಧಿಪಡಿಸಿದೆ. ಕಳೆದ ವಾರ ಚಂದ್ರಯಾನ -3 ರ ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಿದಾಗ, ಭಾರತವು ಆ ಸಾಧನೆಯನ್ನು ಸಾಧಿಸಿದ ನಾಲ್ಕನೇ ದೇಶವಾಗಿದೆ.