
ಓಣಂ ಹಬ್ಬದ ಪ್ರಯುಕ್ತ ಕೇರಳ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯವರಿಗೆ ಗಿಫ್ಟ್ ನೀಡಲಿದ್ದು, ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ನಡೆದಿವೆ. ಕಣ್ಣೂರಿನ ಲೋಕನಾಥ್ ಕೋ ಆಪರೇಟಿವ್ ವೀವಿಂಗ್ ಸೊಸೈಟಿಯು ಕೈ ಮಗ್ಗದಿಂದ ಸಿದ್ಧಪಡಿಸಿರುವ ಕುರ್ತಾವನ್ನು ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ತೆಳು ಹಸಿರು, ಬಿಳಿ, ಗುಲಾಬಿ ಮತ್ತು ಶ್ರೀಗಂಧದ ಬಣ್ಣಗಳ ಜೊತೆಗೆ ರೇಖೆಯನ್ನು ಹೊಂದಿರುವ ಈ ಕುರ್ತಾವನ್ನು ಒಂದು ವಾರ ವಿಶೇಷ ಕಾಳಜಿ ವಹಿಸಿ ಸಿದ್ಧಪಡಿಸಲಾಗಿದ್ದು, ಇದರ ತಯಾರಿಕೆಗಾಗಿ ಮೂರು ಮೀಟರ್ ಬಟ್ಟೆ ಬಳಸಲಾಗಿದೆ.
ಕೊಟ್ಟಾಯಂ ಜಿಲ್ಲೆ ರಾಮಪುರಂ ಅಮಾನಕರ ಮೂಲದ ಅಂಜು ಜೋಸ್ ಎಂಬವರು ಈ ಕುರ್ತಾದ ವಿನ್ಯಾಸಕರಾಗಿದ್ದು, ತಿರುವನಂತಪುರಂನಲ್ಲಿರುವ ಹ್ಯಾಂಟೆಕ್ಸ್ ಟೈಲರಿಂಗ್ ಕೇಂದ್ರದಲ್ಲಿ ಇದನ್ನು ಸಿದ್ದಪಡಿಸಲಾಗಿದೆ. ತಿರು ಓಣಂ ದಿನವಾದ ಆ.29ರಂದು ಇದನ್ನು ನರೇಂದ್ರ ಮೋದಿ ಅವರಿಗೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.