alex Certify ಔಷಧಿಗಳ ಭಂಡಾರ ಅಡುಗೆ ಮನೆಯಲ್ಲಿ ಬಳಸುವ ಕೋಕಮ್‌….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಔಷಧಿಗಳ ಭಂಡಾರ ಅಡುಗೆ ಮನೆಯಲ್ಲಿ ಬಳಸುವ ಕೋಕಮ್‌….!

ಗಾರ್ಸಿನಿಯಾ ಇಂಡಿಕಾ ಎಂದು ಕರೆಯಲ್ಪಡುವ ಕೋಕಮ್ ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಪ್ರಚಲಿತವಾಗಿದೆ. ಇದರ ಕಡು ಕೆಂಪು ಬಣ್ಣದ ಸಿಪ್ಪೆಯನ್ನು ಒಣಗಿಸಿ ಹುಳಿ ಮಸಾಲೆಯನ್ನು ತಯಾರಿಸಲಾಗುತ್ತದೆ. ಇದರಿಂದ ವಿವಿಧ ಬಗೆಯ ಮೇಲೋಗರಗಳನ್ನು ತಯಾರಿಸಲಾಗುತ್ತದೆ. ಕೋಕಮ್‌ ಜ್ಯೂಸ್‌ ಕೂಡ ಬಹಳ ಫೇಮಸ್‌. ಕೋಕಮ್ ಅನ್ನು ಭಾರತೀಯ ಸಾಂಪ್ರದಾಯಿಕ ಔಷಧದಲ್ಲಿ ಶತಮಾನಗಳಿಂದಲೂ ಬಳಸಲಾಗುತ್ತಿದೆ. ಈ ಹಣ್ಣಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಕೋಕಮ್‌ ಕರ್ನಾಟಕದಲ್ಲಿ ಮಾತ್ರವಲ್ಲದೆ ಗೋವಾ ಮತ್ತು ಗುಜರಾತ್‌ನಲ್ಲೂ ಕಂಡುಬರುತ್ತದೆ. ಕೋಕಮ್‌ ಸೇವನೆಯಿಂದ ನಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ.

ಜೀರ್ಣಕ್ರಿಯೆಗೆ ಸಹಕಾರಿ: ಕೋಕಂನಲ್ಲಿರುವ ಆರೋಗ್ಯಕಾರಿ ಅಂಶಗಳು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತವೆ. ಇದು ಆಮ್ಲೀಯತೆಯನ್ನು ಕೂಡ ಕಡಿಮೆ ಮಾಡಬಲ್ಲದು.

ತೂಕ ನಿಯಂತ್ರಣ: ಇದರಲ್ಲಿ ಹೈಡ್ರಾಕ್ಸಿಸಿಟ್ರಿಕ್ ಆಸಿಡ್ ಇದೆ. ತೂಕವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ.

ಉರಿಯೂತ ನಿವಾರಕ ಗುಣಲಕ್ಷಣಗಳು: ಕೋಕಮ್ ಉರಿಯೂತವನ್ನು ಕಡಿಮೆ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ. ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಹೃದಯಕ್ಕೆ ಪ್ರಯೋಜನಕಾರಿ: ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಕೋಕಮ್ ಸಹಕರಿಸುತ್ತದೆ. ಈ ಮೂಲಕ ಹೃದಯವನ್ನು ಆರೋಗ್ಯವಾಗಿಡುತ್ತದೆ.

ಜೀರ್ಣಕ್ರಿಯೆ ಸುಧಾರಣೆ: ಕೋಕಮ್ ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ. ಇದು ಅಧಿಕ ಆಮ್ಲೀಯತೆ ಮತ್ತು ಹೊಟ್ಟೆಯ ಇತರ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು: ಕೋಕಂನಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳ ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

ಕೀಲು ಮತ್ತು ಸ್ನಾಯು ನೋವು: ಕೋಕಮ್ ಉರಿಯೂತವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಕೀಲು ಮತ್ತು ಸ್ನಾಯು ನೋವಿನಿಂದ ಪರಿಹಾರವನ್ನು ನೀಡುತ್ತದೆ.

ಕೊಲೆಸ್ಟ್ರಾಲ್ ನಿಯಂತ್ರಣ: ಕೋಕಂನಲ್ಲಿ ಕಂಡುಬರುವ ಸಂಯುಕ್ತಗಳು ಹೆಚ್ಚಿದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...